Advertisement

The Hundreds; ವೈರಲ್‌ ಆಯ್ತು ಮ್ಯಾಡಿ ವಿಲಿಯರ್ಸ್‌ ಅತ್ಯದ್ಭುತ ಕ್ಯಾಚ್‌: ಇಲ್ಲಿದೆ ವಿಡಿಯೋ

01:11 PM Aug 16, 2024 | Team Udayavani |

ಲಂಡನ್:‌ ಇಂಗ್ಲೆಂಡ್‌ ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್‌ ಟೂರ್ನಮೆಂಟ್‌ ನ  (The Hundreds) ಮಹಿಳಾ ವಿಭಾಗದಲ್ಲಿ ಕೂಟದಲ್ಲಿ ಮ್ಯಾಡಿ ವಿಲಿಯರ್ಸ್‌ (Mady Villiers) ಅವರು ಹಿಡಿದ ಅತ್ಯದ್ಭುತ ಕ್ಯಾಚ್‌ ಇದೀಗ ಎಲ್ಲರ ಗಮನ ಸೆಳೆದಿದೆ. ಓವಲ್‌ ಇನ್ವಿನ್ಸಿಬಲ್‌ ತಂಡದ ಪರವಾಗಿ ಆಡುತ್ತಿರುವ ಮ್ಯಾಡಿ ವಿಲಿಯರ್ಸ್‌ ಇದೀಗ ತನ್ನ ಕ್ಯಾಚ್‌ ನಿಂದಲೇ ಮನೆ ಮಾತಾಗಿದ್ದಾರೆ.

Advertisement

ಬುಧವಾರ (ಆ.14)ರಂದು ನಡೆದ ಟ್ರೆಂಟ್‌ ರಾಕೆಟ್ಸ್‌ ವಿರುದ್ದ ಪಂದ್ಯದಲ್ಲಿ ಮ್ಯಾಡಿ ವಿಲಿಯರ್ಸ್‌ ಕ್ಯಾಚ್‌ ಮೂಲಕ ಕಮಾಲ್‌ ಮಾಡಿದರು. ಟ್ರೆಂಟ್‌ ಬ್ರಿಡ್ಜ್‌ ನಲ್ಲಿ ನಡೆದ ಪಂದ್ಯದಲ್ಲಿ ಮರಿಜಾನ್ನೆ ಕಾಪ್ ಎಸೆತವನ್ನು ಬ್ರಯೋನಿ ಸ್ಮಿತ್ ಲೆಗ್ ಸೈಡ್‌ನಲ್ಲಿ ಬೌಂಡರಿಗೆಂದು ಬಾರಿಸಿದರು. ತನ್ನ ಎಡಕ್ಕೆ ಫುಲ್‌ ಸ್ಟ್ರೆಚ್‌ ಡೈವ್‌ ಮಾಡಿದ ಮ್ಯಾಡಿ ಡಿವಿಲಿಯರ್ಸ್‌ ಗಾಳಿಯಲ್ಲಿ ಹೋಗುತ್ತಿದ್ದ ಚೆಂಡನ್ನು ತನ್ನ ಎಡಗೈಯಿಂದ ಹಿಡಿದು ಎಲ್ಲರ ಹುಬ್ಬೇರುವಂತೆ ಮಾಡಿದರು.

ಮ್ಯಾಡಿ ವಿಲಿಯರ್ಸ್‌ ಅವರ ಅದ್ಭುತ ಕ್ಯಾಚ್‌ ಕಂಡು ಬ್ಯಾಟರ್‌ ದಂಗಾಗಿದ್ದರು. ಈ ಕ್ಯಾಚನ್ನು ಕ್ಯಾಚ್‌ ಆಫ್‌ ದಿ ಟೂರ್ನಮೆಂಟ್‌ ಎಂದು ಬಣ್ಣಿಸಲಾಗುತ್ತಿದೆ.

ಈ ಪಂದ್ಯದಲ್ಲಿ ಸತತ ವಿಕೆಟ್‌ ಕಳೆದುಕೊಂಡ ಟ್ರೆಂಟ್‌ ರಾಕೆಟ್ಸ್‌ 100 ಎಸೆತಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು ಕೇವಲ 91 ರನ್‌ ಮಾತ್ರ ಗಳಿಸಲು ಶಕ್ತವಾಯಿತು. ಏಕಾಂಗಿ ಹೋರಾಟ ನಡೆಸಿದ ಆಶ್‌ ಗಾರ್ಡನರ್‌ 26 ಎಸೆತಗಳಲ್ಲಿ 43 ರನ್‌ ಬಾರಿಸಿದರು. ಮರಿಜಾನ್ನೆ ಕಾಪ್‌ ಅವರು 20 ಎಸೆತಗಳಲ್ಲಿ ಎಂಟು ರನ್‌ ನೀಡಿ ಮೂರು ವಿಕೆಟ್‌ ಪಡೆದರು. ಗುರಿ ಬೆನ್ನತ್ತಿದ್ದ ಇನ್ವಿನ್ಸಿಬಲ್‌ ತಂಡವು ಆರು ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next