Advertisement

ಎರಡು ವರ್ಷಗಳ ಆನಂತರ ಆವೆಯಂಗಳದಲ್ಲಿ ಫೆಡರರ್‌

12:30 AM Feb 21, 2019 | |

ಮ್ಯಾಡ್ರಿಡ್‌: ಈ ಬಾರಿಯ “ಮ್ಯಾಡ್ರಿಡ್‌ ಓಪನ್‌’ ಕೂಟದ ಮೂಲಕ ಸ್ವಿಜರ್‌ಲ್ಯಾಂಡ್‌ ತಾರೆ ರೋಜರ್‌ ಫೆಡರರ್‌ ಆವೆ ಮಣ್ಣಿನ ಅಂಗಳದಲ್ಲಿ ಮತ್ತೆ ಆಡುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

Advertisement

“ಫೆಡರರ್‌ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ನಮಗೆ ಖುಷಿಯಾಗಿದೆ. ಏಕೆಂದರೆ ಮ್ಯಾಡ್ರಿಡ್‌ಗೆ ಅವರ ಮರಳುವಿಕೆ ಇಡೀ ಕೂಟಕ್ಕೆ ಒಂದು ಉಡುಗೊರೆ. ವಿಶಿಷ್ಟ ಆಟಗಾರರ ಆಟವನ್ನು ನೋಡಲು ಅಭಿಮಾನಿಗಳಿಗೆ ಅವಕಾಶ ದೊರಕಿದೆ’ ಎಂದು ಕೂಟದ ನಿರ್ದೇಶಕ ಫೆಲಿಸಿಯಾನೊ ಲೋಪೆಜ್‌ ಹೇಳಿದ್ದಾರೆ.

ಮ್ಯಾಡ್ರಿಡ್‌ ಓಪನ್‌ ಕೂಟದಲ್ಲಿ 3 ಬಾರಿ ಪ್ರಶಸ್ತಿ ಜಯಿಸಿರುವ ಫೆಡರರ್‌ ತಮ್ಮ ವೇಳಾಪಟ್ಟಿಯನ್ನು ನಿಭಾಯಿಸುವ ಸಲುವಾಗಿ ಕಳೆದ 2 ವರ್ಷ ಈ ಕೂಟದಿಂದ ಹಿಂದೆ ಸರಿದಿದ್ದರು.20 ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಆಗಿರುವ ಫೆಡರರ್‌, ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ವಿರುದ್ಧ ಸೋಲುನುಭವಿಸಿದ ಬಳಿಕ ಯಾವುದೇ ಕೂಟದಲ್ಲಿ ಭಾಗವಹಿಸಿಲ್ಲ.

3 ಬಾರಿಯ ಚಾಂಪಿಯನ್‌
ರಫೆಲ್‌ ನಡಾಲ್‌ ಬಳಿಕ ಆವೆ ಅಂಗಳದ ಯಶಸ್ವಿ ಆಟಗಾರ ಎನಿಸಿಕೊಂಡಿರುವ ಫೆಡರರ್‌ 2006, 2009 ಹಾಗೂ 2012ರಲ್ಲಿ ಮ್ಯಾಡ್ರಿಡ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು.ಫೆಡರರ್‌ ಮಾತ್ರವಲ್ಲದೆ ವಿಶ್ವದ ನಂ. 1 ಆಟಗಾರ ನೊವಾಕ್‌ ಜೊಕೋವಿಕ್‌, 11 ಬಾರಿಯ ಫ್ರೆಂಚ್‌ ಓಪನ್‌ ಚಾಂಪಿಯನ್‌ ರಫೆಲ್‌ ನಡಾಲ್‌ ಕೂಡ ಈ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಮೇ 3ರಿಂದ 12ರ ವರೆಗೆ ಮ್ಯಾಡ್ರಿಡ್‌ ಓಪನ್‌ ಕೂಟ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next