Advertisement

ಮದರಸಾ, ಮಸೀದಿಗಳಲ್ಲಿ ಸಂಭ್ರಮ

12:30 PM Jun 17, 2018 | Team Udayavani |

ಹುಣಸೂರು: ಕಳೆದ ಒಂದು ತಿಂಗಳಿನಿಂದ ಉಪವಾಸ ಆಚರಿಸಿದ್ದ ಮುಸ್ಲಿಂ ಬಾಂಧವರು ಹುಣಸೂರು ನಗರದಲ್ಲಿ ಶನಿವಾರದಂದು ರಂಜಾನ್‌ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು.

Advertisement

ನಗರದ ಜಾಮಿಯಾ ಮಸೀದಿ, ದೊಡ್ಡ ಮಸೀದಿ, ಒಂಟೆಪಾಳ್ಯಬೋರೆ, ಶಬ್ಬೀರ್‌ ನಗರ, ಗೋಕುಲರಸ್ತೆ, ಸೇತುವೆ, ಕೇರಳ ಮಸೀದಿ,ಬಜಾರ್‌ ರಸ್ತೆಯ ಮದರಸಾ ಸೇರಿದಂತೆ 14 ಮಸೀದಿ ಹಾಗೂ ನಗರಕ್ಕೆ ಸಮೀಪದ ಆಜಾದ್‌ ನಗರದ ಮಸೀದಿಗಳಿಂದ ಹೊಸ ಬಟ್ಟೆ ತೊಟ್ಟಿದ್ದ ಮಂದಿ ಅಲ್ಲಾ ಹೋ ಅಕºರ್‌ ಎನ್ನುತ್ತಾ ಮೆರವಣಿಗೆಯಲ್ಲಿ ಪ್ರತ್ಯೇಕವಾಗಿ ಸಾಗಿ ರೋಟರಿ ವೃತ್ತದ ಬಳಿಯ ಈದ್ಗಾ ಮೈದಾನಕ್ಕಾಗಮಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮಸೀದಿಯ ಮೌಲ್ವಿಗಳಾದ ಖಯಾಮುದ್ದೀನ್‌, ಶಾ ಆಲಂ ನೇತತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಂಜಾನ್‌ ಹಬ್ಬದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯವನ್ನು ಕೋರಿದರು. ತಾಲೂಕಿನ ಹೈರಿಗೆ, ರತ್ನಪುರಿ, ಹನಗೋಡು, ಬಿಳಿಕೆರೆ, ಮರೂರು, ಕುಡಿನೀರು ಮುದ್ದನಹಳ್ಳಿ, ಚಿಲ್ಕುಂದ,ಬಿಳಿಕೆರೆ ಇತರೆಡೆ ರಂಜಾನ್‌ ಆಚರಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next