Advertisement

ಹಿಂದೂಗಳ ಹಬ್ಬ, ಮೆರವಣಿಗೆ ನಿಷೇಧಿಸಿ;ಮುಸ್ಲಿಮರ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

11:53 AM May 14, 2021 | Team Udayavani |

ಚೆನ್ನೈ: ಒಂದು ವೇಳೆ ಧಾರ್ಮಿಕ ಅಸಹಿಷ್ಣುತೆಗೆ ಅನುಮತಿ ನೀಡಿದರೆ, ಅದು ಜಾತ್ಯತೀತ ದೇಶಕ್ಕೆ ಒಳ್ಳೆಯದಲ್ಲ. ಯಾವುದೇ ಧಾರ್ಮಿಕ ಗುಂಪಿನ ಹಬ್ಬದ ಆಚರಣೆ, ಮೆರವಣಿಗೆಗೆ ಸಂಬಂಧಿಸಿದ ಅಸಹಿಷ್ಣುತೆಗೆ ಅವಕಾಶ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಪೀಠ ಇತ್ತೀಚೆಗೆ ಅಭಿಪ್ರಾಯವ್ಯಕ್ತಪಡಿಸಿದೆ.

Advertisement

ಇದನ್ನೂ ಓದಿ:ಅಮೆರಿಕಾದಲ್ಲಿ ಸಂಪೂರ್ಣ ಕೋವಿಡ್ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ : ಸಿಡಿಸಿ

ಭಾರತ ಜಾತ್ಯತೀತ ದೇಶವಾಗಿದ್ದು, ಬಹುಸಂಖ್ಯಾತ ಧಾರ್ಮಿಕ ಗುಂಪಿನ ಹಬ್ಬ, ಮೆರವಣಿಗಳನ್ನು ನಡೆಸುವ ಮೂಲಭೂತ ಹಕ್ಕನ್ನು ತಡೆಯಲು ಇತರ ಸಮುದಾಯಕ್ಕೆ ಕಾನೂನಿನ ಸಹಮತ ಇಲ್ಲ ಎಂದು ಪೀಠ ಹೇಳಿದೆ.

ಹಿಂದೂಗಳ ಹಬ್ಬ, ಧಾರ್ಮಿಕ ಮೆರವಣಿಗೆ ನಡೆಸುವುದಕ್ಕೆ ತಡೆ ನೀಡಬೇಕೆಂಬ ಹಿಂದು-ಮುಸ್ಲಿಂ ನಿವಾಸಿಗಳ ದೀರ್ಘಕಾಲದ ವಿವಾದದ ಕುರಿತು ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಪೀಠದ ಜಸ್ಟೀಸ್ ಎನ್ ಕಿರುಬಾಕರನ್ ಮತ್ತು ಜಸ್ಟೀಸ್ ಪಿ.ವೇಲುಮುರುಗನ್ ತಿಳಿಸಿದ್ದಾರೆ.

ಭಾರತ ಜಾತ್ಯತೀತ ದೇಶವಾಗಿದೆ ಅಲ್ಲದೇ ಕೇವಲ ಒಂದು ಧಾರ್ಮಿಕ ಗುಂಪು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿ ವಾಸಿಸುತ್ತಿರುವಾಗ, ಆ ಪ್ರದೇಶದಲ್ಲಿ ಇತರ ಧಾರ್ಮಿಕ ಹಬ್ಬಗಳು ಅಥವಾ ಮೆರವಣಿಗಗಳನ್ನು ನಡೆಸಲು ಅನುಮತಿ ನೀಡಬಾರದು ಎಂಬುದು ಸಮಂಜಸವಲ್ಲ ಎಂದು ಪೀಠ ಹೇಳಿದೆ.

Advertisement

ಏನಿದು ವಿವಾದ:
1951ರಿಂದಲೂ ಎರಡು ಧಾರ್ಮಿಕ ಗುಂಪುಗಳ ನಡುವೆ ಶೇ.96ರಷ್ಟು ಸರ್ಕಾರಿ ಪರಂಬೋಕು ಜಾಗದ ವಿಚಾರದಲ್ಲಿ ವಿವಾದ ನಡೆಯುತ್ತಲೇ ಇತ್ತು. ಆದರೆ ಮುಸ್ಲಿಮರು ಈ ಜಾಗವನ್ನು ಸಾಮಾನ್ಯ ಸ್ಥಳವಾಗಿ ಬಳಸಬೇಕೆಂದು ವಾದಿಸಿದ್ದರೆ, ಹಿಂದುಗಳು ನಾವು ದೀರ್ಘಕಾಲದಿಂದ ಪರಂಬೋಕು ಸ್ಥಳವನ್ನು ಬಳಸುತ್ತಿದ್ದು, ಇದನ್ನು ಸಾಮಾನ್ಯ ಸ್ಥಳವಾಗಿ ಬಳಸಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದರು. ಈ ವಿವಾದದ ಹಿನ್ನೆಲೆಯಲ್ಲಿ ಹಲವಾರು ಬಾರಿ ಘರ್ಷಣೆ, ಗಲಾಟೆ ನಡೆದು ಹಿಂದೂ, ಮುಸ್ಲಿಮರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.

2011ರವರೆಗೂ ಈ ಸ್ಥಳದಲ್ಲಿ ಮೂರು ದೇವಸ್ಥಾನಗಳ ಹಬ್ಬ, ಹರಿದಿನಗಳನ್ನು ಶಾಂತಿಯುತವಾಗಿ ನಡೆಸಿದ್ದರು. 2012ರ ನಂತರ ಹಿಂದೂಗಳ ಹಬ್ಬವನ್ನು ಆಚರಿಸಲು ಮುಸ್ಲಿಮರು ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದರು. ಇದು ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದ್ದು, ಹಿಂದೂಗಳ ಹಬ್ಬದ ಆಚರಣೆಗೆ ಇಲ್ಲ ಎಂಬುದಾಗಿ ಪ್ರತಿಪಾದಿಸಿರುವುದಾಗಿ ವರದಿ ವಿವರಿಸಿದೆ.

ಇದನ್ನೂ ಓದಿ:ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

ಮುಸ್ಲಿಂ ಸಂಘಟನೆಯ ಆಕ್ಷೇಪ, ಕೋರ್ಟ್ ಕಟಕಟೆಗೆ ಏರಿದ ಪರಿಣಾಮ 2012 ಮತ್ತು 2015ರಲ್ಲಿ ಕೋರ್ಟ್ ವಿವಿಧ ನಿರ್ಬಂಧಗಳ ಆದೇಶದ ಮೂಲಕ ಹಿಂದೂಗಳ ಹಬ್ಬವನ್ನು ಆಚರಿಸಲು ಅನುಮತಿ ನೀಡಿತ್ತು.

2018ರಲ್ಲಿ ಕಂದಾಯ ಇಲಾಖೆಯ ಅಧಿಕಾರಿ, ಈ ಸ್ಥಳದಲ್ಲಿ ಹಿಂದೂಗಳು ಹಬ್ಬವನ್ನು ಆಚರಿಸುವಂತೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದ್ದರು. ಆದರೆ ಇದನ್ನು ಮುಸ್ಲಿಮರು ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.

ಮದ್ರಾಸ್ ಹೈಕೋರ್ಟ್ ಕೂಡಾ ಕೆಲವೊಂದು ಷರತ್ತುಗಳನ್ನು ವಿಧಿಸಿ ಹಬ್ಬಗಳನ್ನು ಆಚರಿಸಲು ಅನುಮತಿ ನೀಡಿತ್ತು. ನಂತರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ದೀರ್ಘಕಾಲದವರೆಗೂ ಮುಂದುವರಿದಿದ್ದು, ಹೈಕೋರ್ಟ್ ಪೀಠ ಸ್ಥಳಕ್ಕೆ ಸಂಬಂಧಿಸಿದಂತೆ ಈ ಮಹತ್ವದ ಆದೇಶವನ್ನು ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next