Advertisement

16 ವರ್ಷ ಮೇಲ್ಪಟ್ಟವರ ಸಮ್ಮತಿ ಸಂಬಂಧ ಪೋಕ್ಸೋದಿಂದ ಹೊರಗಿಡಿ

11:31 PM Apr 27, 2019 | mahesh |

ಚೆನ್ನೈ: 16 ವರ್ಷಕ್ಕಿಂತ ಮೇಲ್ಪಟ್ಟ ಯುವಕ ಹಾಗೂ ಯುವತಿಯ ಸಮ್ಮತಿ ಸಹಿತ ಸಂಬಂಧವನ್ನು ಪೋಕ್ಸೋ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಸಲಹೆ ನೀಡಿದೆ. ಈ ಸಂಬಂಧವನ್ನು ಅಸಹಜ ಎಂದು ಪರಿಗಣಿಸಲಾಗದು. ಹೀಗಾಗಿ ಇದನ್ನು ಹೆಚ್ಚು ಉದಾರ ದೃಷ್ಟಿಯಿಂದ ಪರಿಗಣಿಸಬೇಕಿದೆ ಎಂದು ನ್ಯಾಯಮೂರ್ತಿ ವಿ ಪಥಿಬನ್‌ ಹೇಳಿದ್ದಾರೆ.

Advertisement

17 ವರ್ಷದ ಯುವತಿಯನ್ನು ಅಪಹರಿಸಿ, ಲೈಂಗಿಕವಾಗಿ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ 10 ವರ್ಷ ಜೈಲು ಶಿಕ್ಷೆಯನ್ನು ಮಹಿಳಾ ನ್ಯಾಯಾಲಯ ವಿಧಿಸಿದ ಹಿನ್ನೆಲೆಯಲ್ಲಿ ಆರೋಪಿ ಹೈಕೋರ್ಟ್‌ ಮೊರೆ ಹೋಗಿದ್ದ. ಅಲ್ಲದೆ ಈ ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣೆ ರಾಜ್ಯ ಆಯೋಗ, ಸಾಮಾಜಿಕ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಹಲವು ಇಲಾಖೆಗಳಿಗೆ ಕೋರ್ಟ್‌ ನಿರ್ದೇಶನ ನೀಡಿದೆ. ಸದ್ಯ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳನ್ನು ಮಗು ಎಂದು ಪರಿಗಣಿಸಲಾಗಿದ್ದು, 16 ಅಥವಾ 17 ವರ್ಷದ ಬಾಲಕಿಯೊಂದಿಗೆ ವ್ಯಕ್ತಿ ಪ್ರೇಮ ಸಂಬಂಧ ಹೊಂದಿದ್ದರೆ, ಆತನಿಗೆ ಕಠಿಣ ಶಿಕ್ಷೆ ವಿಧಿಸುವ ಅವಕಾಶ ಪೋಕ್ಸೋ ಕಾನೂನಿನಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next