Advertisement
ಪ್ರಕರಣ ಹಿನ್ನೆಲೆ2022ರ ಮೇ 11ರಂದು ಗಾಳಿಬೀಡು ಕಾಲೂರು ರಸ್ತೆಯಲ್ಲಿ ಅರಣ್ಯ ರಕ್ಷಕ ಅಪ್ಪಣ್ಣ ರೈ ಅವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಅವರನ್ನು ದಾರಿ ಮಧ್ಯೆ ತಡೆದ ತಿಮ್ಮಯ್ಯ, ಗಾಳಿಬೀಡು ಪಂಚಾಯಿತಿಗೆ ಕಸ ವಿಲೇವಾರಿ ಮಾಡಲು ತಮ್ಮ ಮನೆಯ ಪಕ್ಕದ ಜಾಗವನ್ನು ತೋರಿಸಿಕೊಟ್ಟಿದ್ದೀಯ ಎಂದು ಪ್ರಶ್ನಿಸಿ ಕತ್ತಿಯಿಂದ ಕಡಿಯಲು ಮುಂದಾಗಿದ್ದ. ಈ ವೇಳೆ ಅಪ್ಪಣ್ಣ ರೈ ಅವರು ಎಡಕೈಯಿಂದ ತಡೆದಾಗ ಅವರ ಕೈ ಬೆರಳುಗಳು ತುಂಡಾಗಿದ್ದವು. ತಿಮ್ಮ ಯ್ಯ ಮತ್ತೂಮ್ಮೆ ಹಲ್ಲೆ ಮಾಡಿದಾಗ ಅಪ್ಪಣ್ಣ ರೈ ತಮ್ಮ ಬಲಕೈಯಿಂದ ತಡೆಯಲು ಪ್ರಯತ್ನಿಸಿದಾಗ ಬಲ ಕೈಗೆ ಕೂಡ ಗಂಭೀರ ಗಾಯವಾಗಿತ್ತು ಎಂದು ಆರೋಪಿಸಲಾಗಿತ್ತು.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಕೆ.ಜೆ. ಅಶ್ವಿನಿ ವಾದ ಮಂಡಿಸಿದ್ದಾರೆ.