Advertisement

ಮಡಿಕೇರಿ: ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ

08:41 PM Jul 16, 2019 | sudhir |

ಮಡಿಕೇರಿ :ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್‌ ಅವರು ನಗರದ ಆಜಾದ್‌ ನಗರದಲ್ಲಿ ಸೋಮವಾರ ಚಾಲನೆ ನೀಡಿದರು.

Advertisement

ಕ್ಷಯರೋಗ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಕೊಳಚೆ ಪ್ರದೇಶಗಳು, ಸಣ್ಣ ಸಣ್ಣ ಮನೆಗಳು ಹಾಗೂ ಜನದಟ್ಟಣೆ ಪ್ರದೇಶದಲ್ಲಿನ ಮನೆ ಮನೆಗೆ ತೆರಳಿ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮ ನಡೆಯಲಿದೆ.

ಡಾ.ಕೆ.ಮೋಹನ್‌ ಮಾತನಾಡಿ ಕ್ಷಯ ರೋಗದ ಲಕ್ಷಣವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅಂತಹವರನ್ನು ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ಸೇವೆ ಕಲ್ಪಿಸುವುದು ಈ ಆಂದೋಲನದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿ ಕಾರಿ ಡಾ.ಎ.ಸಿ.ಶಿವಕುಮಾರ್‌ ಅವರು ಮಾತನಾಡಿ ಸಕ್ರಿಯಾ ಕ್ಷಯರೋಗ ಪತ್ತೆ ಆಂದೋಲನವು ಜುಲೈ, 27 ರವರೆಗೆ ನಡೆಯಲಿದೆ. ಸಕ್ರಿಯಾ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮ, ಆರೋಗ್ಯ ಕಾರ್ಯಕರ್ತೆಯರು ಹೈರಿಸ್ಕ್ ಇರುವ ಪ್ರದೇಶಗಳ ಮನೆ ಮನೆಗೆ ತೆರಳಿ ಕ್ಷಯರೋಗ ಲಕ್ಷಣ ಕಂಡುಬಂದಲ್ಲಿ ಕಫ‌ ಸಂಗ್ರಹಿಸಿ ತ್ವರಿತವಾಗಿ ಪರೀಕ್ಷೆ ಮಾಡಿಸಿ ಚಿಕಿತ್ಸೆ ನೀಡುವುದು ಆಂದೋಲನದ ಉದ್ದೇಶವಾಗಿದೆ ಎಂದುತಿಳಿಸಿದರು. ಮನ್ಸೂರ್‌, ಅನುಷ್ಠಾನಾಧಿಕಾರಿ ಗಳಾದ ಡಾ.ಆನಂದ್‌, ಡಾ.ಎಂ.ಶಿವಕುಮಾರ್‌, ಡಾ.ಗೋಪಿನಾಥ್‌, ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್‌, ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next