Advertisement

ಮಡಿಕೇರಿ: ಪ್ರವಾಸಿತಾಣ ರಾಜಾಸೀಟಿಗೆ ಆನೆ ಬಂತು ಆನೆ !

01:01 PM Jun 02, 2019 | sudhir |

ಮಡಿಕೇರಿ: ಮಡಿಕೇರಿ ನಗರದ ಹೆಸರುವಾಸಿ ಪ್ರವಾಸಿತಾಣ ರಾಜಾಸೀಟು ಉದ್ಯಾನವನ ಈಗ ಮತ್ತಷ್ಟು ಆಕರ್ಷ ಣೆಯನ್ನು ಪಡೆದುಕೊಂಡಿದೆ. ವನ್ಯ ಜೀವಿಗಳ ಬೃಹತ್‌ ಕಲಾಕೃತಿಗಳನ್ನು ಅಳವಡಿಸಲಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಎತ್ತರದ ಆನೆ ಕಲಾಕೃತಿ ಹೆಚ್ಚು ಗಮನ ಸೆಳೆಯುತ್ತಿದೆ.

Advertisement

ಜಿಲ್ಲಾಡಳಿತದ ಆಸಕ್ತಿಯಿಂದಾಗಿ ರಾಜಾಸೀಟಿಗೆ ಹೆಚ್ಚು ಮೆರುಗು ಬಂದಿದೆ ಎಂದು ಸ್ಥಳೀಯ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಮಾರು 18 ಲಕ್ಷ ರೂ. ವೆಚ್ಚದ ಕಲಾಕೃತಿಗಳನ್ನು ಪುಣೆಯಿಂದ ತರಲಾಗಿದ್ದು, ನವಿಲು, ಜಿಂಕೆ, ಮೊಲ, ಹುಲಿ, ಜಿರಾಫೆ, ಆನೆ ಹಾಗೂ ಇನ್ನಿತರ ಕಲಾಕೃತಿಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ. ಪ್ರವಾಸಿಗರು ಕುಳಿತುಕೊಳ್ಳಲು ಆಕರ್ಷಕ ಕಲ್ಲುಬೆಂಚು ಅಳವಡಿ ಸಲಾಗುವುದು ಮತ್ತು ವೀಕ್ಷಣಾ ಗೋಪುರವನ್ನು ಮತ್ತಷ್ಟು ಅಂದಗಾ ಣಿಸಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ದೇವಕ್ಕಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next