Advertisement

ಮಡಿಕೇರಿ: ಮೊಬೈಲ್‌ ಬಳಕೆ ದುಷ್ಪರಿಣಾಮ; ಉಪನ್ಯಾಸ

01:00 AM Mar 04, 2019 | Team Udayavani |

ಮಡಿಕೇರಿ: ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೋಟರಿ ಕ್ಲಬ್‌ ವತಿಯಿಂದ “”ಮೊಬೈಲ್‌ ಬಳಕೆಯಿಂದಾಗಿ ವಿದ್ಯಾರ್ಥಿಗಳ ಕಿವಿ ಹಾಗೂ ಮೆದುಳಿನ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

Advertisement

ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಇಎನ್‌ಟಿ ತಜ್ಞ ಡಾ.ಅಚ್ಚಯ್ಯ ಮೊಬೈಲ್‌ಗ‌ಳನ್ನು ಯಾವ ಸಮಯದಲ್ಲಿ ಹೇಗೆ ಬಳಸಬೇಕು ಮತ್ತು ಇದರಿಂದ ವಿದ್ಯಾರ್ಥಿಗಳ ಮೇಲೆ ಯಾವ ರೀತಿಯ ದುಷ್ಪರಿಣಾಮವಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡಿದರು. 

ಸೂಕ್ತ ರೀತಿಯ ಚಿಕಿತ್ಸೆ ಮತ್ತು ನಿಯಂತ್ರಣದ ಕುರಿತು ಮನವರಿಕೆ ಮಾಡಿಕೊಟ್ಟರು.

ಕಾಲೇಜು ಪ್ರಾಂಶುಪಾಲ ಡಾ.ಟಿ.ಡಿ.ತಿಮ್ಮಯ್ಯ, ರೋಟರಿ ಕ್ಲಬ್‌ ಅಧ್ಯಕ್ಷ ನಿವೃತ್ತ ಮೇಜರ್‌ ಒ.ಎಸ್‌.ಚಿಂಗಪ್ಪ, ಸದಸ್ಯ ಎನ್‌.ಡಿ.ಅಚ್ಚಯ್ಯ, ಕಾರ್ಯದರ್ಶಿ ಮ್ರಿನಾಲಿನಿ ಚಿನ್ನಪ್ಪ, ಜ್ಯೋತಿ ಚಿಂಗಪ್ಪ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಗೀತಾಂಜಲಿ, ಸಚಿನ್‌ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next