Advertisement

ಮಡಿಕೇರಿ: ಮರ ಬಿದ್ದು ವ್ಯಕ್ತಿ ಸಾವು

07:40 PM Aug 11, 2022 | Team Udayavani |

ಮಡಿಕೇರಿ: ಮರ ಬಿದ್ದು ತೋಟದ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

Advertisement

ಗುಹ್ಯ ಗ್ರಾಮದ ಕಕ್ಕಟಕಾಡು ನಿವಾಸಿ ಪ್ರಕಾಶ್‌ (52) ಎಂಬುವವರೇ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ.

ಅಮ್ಮತ್ತಿ ಹೊಸಕೋಟೆ ಸಮೀಪದ  ತೋಟವೊಂದರಲ್ಲಿ  ಪ್ರಕಾಶ್‌ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಭಾರೀ ಗಾತ್ರದ ಮರವೊಂದು ಇವರ ಮೇಲೆ ಬಿದ್ದು ದುರ್ಘ‌ಟನೆ ಸಂಭವಿಸಿದೆ. ಪ್ರಕಾಶ್‌ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕ ರಘು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್‌ ಅರ್ಚನಾ ಭಟ್‌, ಕಂದಾಯ ನಿರೀಕ್ಷಕ ಅನಿಲ್‌ ಕುಮಾರ್‌ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next