Advertisement

ಮಡಿಕೇರಿ: ಸರಳ ದಸರಾಕ್ಕೆ ತೆರೆ

10:15 PM Oct 26, 2020 | mahesh |

ಮಡಿಕೇರಿ: ಮಡಿಕೇರಿ ದಸರಾ ಮಹೋತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೋವಿಡ್‌ ಕಾರಣದಿಂದ ಅತ್ಯಂತ ಸರಳವಾಗಿ ವಿಜಯ ದಶಮಿಯನ್ನು ಆಚರಿಸಲಾಯಿತು. ಸೋಮವಾರ ದೇವರ ಒಂದು ಸಣ್ಣ ಮೂರ್ತಿ ಮತ್ತು ಕಳಸ ಮೆರವಣಿಗೆಯನ್ನಷ್ಟೇ ಮಾಡಲಾಯಿತು. ನಗರದ ದಶ ಮಂಟಪ ಸಮಿತಿಗಳು ಸಣ್ಣ ಸಣ್ಣ ಮಂಟಪಗಳೊಂದಿಗೆ ಮುಂದೆ ಸಾಗಿದವು. ದಶಮಂಟಪ ಶೋಭಾಯಾತ್ರೆಗೆ ಅವಕಾಶ ಇರಲಿಲ್ಲ.

Advertisement

ಇಲ್ಲಿನ ದಸರಾದಲ್ಲಿ 10 ದೇವಾಲಯಗಳ ಮಂಟಪಗಳು ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದವು. ಶ್ರೀ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ಪೇಟೆ ರಾಮ ಮಂದಿರ, ಶ್ರೀ ಕೋಟೆ ಗಣಪತಿ, ದೇಚೂರು ಶ್ರೀರಾಮ ಮಂದಿರ, ಕರವಲೆ ಭಗವತಿ, ಶ್ರೀ ಚೌಡೇಶ್ವರಿ, ಶ್ರೀ ಕೋದಂಡರಾಮ ಮಂಟಪಗಳು ಶೋಭಾಯಾತ್ರೆಯಲ್ಲಿ ಸಾಗುತ್ತಿದ್ದವು.

ಜನಸಂದಣಿಯನ್ನು ತಡೆಯುವ ಸಲುವಾಗಿ ನಗರದ ಎಲ್ಲ ಪ್ರವಾಸಿತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಮದ್ಯ ಮಾರಾಟವನ್ನು ಎರಡು ದಿನಗಳ ಕಾಲ ನಿಷೇಧಿಸಲಾಗಿತ್ತು. ನಗರದ ಶಕ್ತಿ ದೇವತೆಗಳಾದ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ ಹಾಗೂ ಶ್ರೀಕಂಚಿ ಕಾಮಾಕ್ಷಿಯಮ್ಮ ಕರಗಗಳು ರಾತ್ರಿ ಸಂಪ್ರದಾಯದಂತೆ ಸಾಗಿ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾಕ್ಕೆ ತೆರೆ ಎಳೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next