Advertisement

ಮಡಿಕೇರಿ : ಒಂಟಿ ಮನೆಗೆ ಕನ್ನ ಹಾಕಿದ ಆರೋಪಿಯ ಸೆರೆ

12:45 AM Jun 06, 2022 | Team Udayavani |

ಮಡಿಕೇರಿ : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ, ಪೊರಾಡು ಗ್ರಾಮದ ತೋಟದ ಮಧ್ಯೆ ಇರುವ ಒಂಟಿ ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶ್ರೀಮಂಗಲ ಪೊಲೀಸರು ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ.

Advertisement

ಕೇರಳದ ಕಾಸರಗೋಡು ಜಿಲ್ಲೆಯ ಪೊಡಮಕಲ್‌ ಗ್ರಾಮದ ಸಜೇಶ್‌ ಕೃಷ್ಣ ಬಂಧಿತ ಆರೋಪಿ.

ಈತ ಮೇ 29ರಂದು ಬಿರುನಾಣಿ ಪೊರಾಡು ಗ್ರಾಮದ ಅಣ್ಣೀರ ಎಂ. ಲೋಕೇಶ್‌ ಹಾಗೂ ಅವರ ಕುಟುಂಬದವರು ತಮ್ಮ ಸಂಬಂಧಿಕರ ಮನೆಗೆ ಹೋಗಿರುವುದನ್ನು ಗಮನಿಸಿ ರಾತ್ರಿ ಮನೆಯ ಹಿಂಬಾಗಿಲು ಹಾಗೂ ಛಾವಣಿಯನ್ನು ಮುರಿದು ಒಳ ನುಗ್ಗಿದ್ದಾನೆ. 14 ಗ್ರಾಂ ಚಿನ್ನ, 48 ಸಾವಿರ ನಗದು ಮತ್ತು ಪೀಚೆಕತ್ತಿಯ ಬೆಳ್ಳಿಯ ಸರವನ್ನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಕೇರಳದ ಕಣ್ಣೂರಿಗೆ ತೆರಳಿ ಆಭರಣ ಮಾರಾಟ ಮಾಡಿ 16 ಸಾವಿರ ರೂ.ನ ಮೊಬೈಲ್‌ ಹಾಗೂ 50 ಸಾವಿರದ ಬೈಕ್‌ ಖರೀದಿಸಿದ್ದ. ಆರೋಪಿ ಬೆಳೆಗಾರ ಅಣ್ಣೀರ ಲೋಕೇಶ್‌ ಅವರ ಮನೆಯಲ್ಲಿ ಕಾರ್ಮಿಕನಾಗಿದ್ದು, ಸಮೀಪದ ಲೈನ್‌ ಮನೆಯಲ್ಲೇ ವಾಸವಾಗಿದ್ದ. ಕಳವು ಮಾಡಿ ನಾಪತ್ತೆಯಾಗಿದ್ದ ಕಾರ್ಮಿಕ ಸಜೇಶ್‌ ಕೃಷ್ಣ ಬಗ್ಗೆ ಸಂಶಯ ವ್ಯಕ್ತಪಡಿಸಿ ಬೆಳೆಗಾರ ಲೋಕೇಶ್‌ ಅವರು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ :ಮಡಿಕೇರಿ : ಭೂಕಂಟಕಕ್ಕೆ ಸಿಲುಕಿದ ವಾಲ್ನೂರು -ತ್ಯಾಗತ್ತೂರು ಗ್ರಾಮ ಪಂಚಾಯತ್ 

Advertisement

ಆರೋಪಿಯಯನ್ನು ಸೆರೆ ಹಿಡಿದ ಪೊಲೀಸರು, ಹಣ ಹಾಗೂ ಆಭರಣ, ಖರೀದಿಸಿದ್ದ ಬೈಕ್‌, ಖರ್ಚಾಗದೇ ಉಳಿದಿದ್ದ ಹಣ ಮತ್ತು ಮೊಬೈಲ್‌ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ನಡೆದು ಕೇವಲ 5 ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next