ಮಡಿಕೇರಿ: ವೀರಾಜಪೇಟೆಯ ತೋರ ಗ್ರಾಮದಲ್ಲಿ ಮಣಿಪಾರೆ ಬೆಟ್ಟ ಕುಸಿದು ಮೃತಪಟ್ಟಿದ್ದಅಪ್ಪು (60) ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ಇದರೊಂದಿಗೆ ಪ್ರಕೃತಿ ವಿಕೋಪದಲ್ಲಿ ಸಾವಿಗೀಡಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಆ.9ರಂದು ಇಲ್ಲಿ ಬೆಟ್ಟ ಕುಸಿದು ಇಬ್ಬರು ಸಾವನ್ನಪ್ಪಿ, ಎಂಟು ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಸಾವಿಗೀಡಾಗಿದ್ದ ಮಮತಾ(40) ಮತ್ತು ಲಿಖೀತಾ (15)ಮೃತ ದೇಹಗಳನ್ನು ಅಂದೇ ಹೊರ ತೆಗೆಯಲಾಗಿತ್ತು. ಇನ್ನುಳಿ ದವರ ಶೋಧಕ್ಕೆ ಮಳೆಯಿಂದ ಅಡಚಣೆಯಾಗಿತ್ತು. ಸೋಮವಾರ ಅನುಸೂಯಾ ಎಂಬವರ ಮೃತದೇಹ ಪತ್ತೆಯಾಗಿತ್ತು.
ಮಂಗಳವಾರ 6 ಹಿಟಾಚಿ ಬಳಸಿಶೋಧ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ ಬುಧವಾರ ಅಪ್ಪು ಅವರ ಮೃತದೇಹ ಪತ್ತೆಯಾಗಿದೆ.
ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಅಪ್ಪು ಮತ್ತು ಅವರ ಕುಟುಂಬ ಸದಸ್ಯರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದರು. ಪ್ರಸ್ತುತ ಸ್ಥಳದಲ್ಲಿ ಮನೆ, ತೋಟದ ಸುಳಿವಿಲ್ಲದಂತೆ ಗುಡ್ಡದ ಮಣ್ಣು ಆವರಿಸಿಕೊಂಡಿದೆ.
ಪ್ರಭು ಅವರ ತಾಯಿ ದೇವಕಿ (65), ಮಕ್ಕಳಾದ ಅಮೃತಾ (13) ಮತ್ತು ಆದಿತ್ಯ (10)ಹಾಗೂ ಹರೀಶ್ ಎಂಬವರ ಕುಟುಂಬದ ಸದಸ್ಯರಾದ ಶಂಕರ,ಲೀಲಾ ಮತ್ತು ವೀಣಾ ನಾಪತ್ತೆ ಯಾಗಿದ್ದಾರೆ. ಶೋಧ ಮುಂದುವರಿದಿದೆ.