Advertisement

ಮಡಿಕೇರಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

07:20 AM Aug 16, 2017 | Team Udayavani |

ಮಡಿಕೇರಿ: ಸ್ವಾತಂತ್ರ್ಯದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಭೇದ-ಭಾವ ವಿಲ್ಲದೆ ಸರ್ವರೂ ಒಂದಾಗಿ ದೇಶವನ್ನು ಕಟ್ಟಿ ಬೆಳೆ ಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್‌. ಸೀತಾರಾಂ ಕರೆ ನೀಡಿದ್ದಾರೆ.

Advertisement

ಕೊಡಗು ಜಿಲ್ಲಾಡಳಿತದಿಂದ ನಗರದ ಕೋಟೆ ಆವರಣದಲ್ಲಿ  ನಡೆದ 71ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ತ್ರಿವರ್ಣ ಧ್ವಜಾರೋಹಣ ಗೈದು ಸಚಿವರು ಸಂದೇಶ ನೀಡಿದರು.

ಎಸ್‌ಪಿಗೆ ಸಮ್ಮಾನ: ರಾಷ್ಟ್ರಪತಿ ಪದಕ ಪಡೆದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ ಅವರನ್ನು ಉಸ್ತುವಾರಿ ಸಚಿವರು ಮತ್ತು ಅತಿಥಿ ಗಣ್ಯರು ಸಮ್ಮಾನಿಸಿ ಗೌರವಿಸಿದರು.

ಪುರಸ್ಕಾರ: ಕಳೆದ ಶೈಕ್ಷಣಿಕ ಸಾಲಿನಲ್ಲಿ ಪಿಯು ಸಿಯ ಜಿಲ್ಲೆಗೆ ಪ್ರಥಮರಾದ ವಿಜ್ಞಾನ ವಿಭಾಗದ: ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಎನ್‌.ಎಸ್‌.ಮುತ್ತಮ್ಮ,ವಾಣಿಜ್ಯ ವಿಭಾಗ: ಪೊನ್ನಂಪೇಟೆ  ಸಂತ ಅಂಥೋಣಿ ವಿದ್ಯಾಸಂಸ್ಥೆಯ ಕೆ.ಜಿ. ಕಾವೇರಮ್ಮ, 
ಕಲಾ ವಿಭಾಗ: ಮದೆ ಮಹೇಶ್ವರ ಶಾಲೆಯ ಹೇಮಂತ್‌ ಕೆ.ಎ., ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶನಿವಾರ‌ಸಂತೆಯ ಸೇಕ್ರೆಡ್‌ ಹಾರ್ಟ್‌ ಶಾಲೆಯ ರಚನಾ ಆರ್‌. ಮತ್ತು ಕನ್ನಡ ವಿಭಾಗ ದಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಂಟಿಕೊಪ್ಪ ಪ್ರೌಢಶಾಲೆಯ ನವ್ಯಾ ಅವರನ್ನು ಪುರಸ್ಕರಿಸಲಾಯಿತು.

ಇದೇ ಸಂದರ್ಭ ಪತ್ರಕರ್ತರಿಗೆ ರಾಜ್ಯ ಸರಕಾರ ದಿಂದ ಕೊಡಮಾಡಲಾಗಿರುವ ಆರೋಗ್ಯ ಭಾಗ್ಯ ಕಾರ್ಡ್‌ನ್ನು ಸಚಿವ ಸೀತಾರಾಂ ಅವರು ಹಿರಿಯ ಪತ್ರಕರ್ತ ಕೆ.ಬಿ. ಮಹಂತೇಶ್‌ ಮತ್ತು ಇಂದ್ರೇಶ್‌ ಅವರಿಗೆ ವಿತರಿಸಿದರು.

Advertisement

ಜೀವ ರಕ್ಷಕ ಪ್ರಶಸ್ತಿ ಪ್ರದಾನ : ನಿಸ್ವಾರ್ಥ ಸಮಾಜ ಸೇವೆಗೆ ಕೊಡಮಾಡುವ ಜೀವ ರಕ್ಷಕ ಪ್ರಶಸ್ತಿಯನ್ನು ಪಿ.ಎಂ. ಶೈಲಜಾ, ಮೊಹಮ್ಮದ್‌ ರಫೀಕ್‌ ಮತ್ತುಎಂ.ಬಿ. ಮುನೀರ್‌ ಅವರಿಗೆ ಪ್ರದಾನಿಸಲಾಯಿತು.

ಇದೇ ಸಂದರ್ಭ ಭಾರತ್‌ ಸ್ಕೌಟ್ಸ್‌ ಮತ್ತು ಮತ್ತು ಗೈಡ್ಸ್‌ ಸಂಸ್ಥೆಯಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ಪೆ‌ೂನ್ನಂಪೇಟೆಯ ಕೆ.ಕೆ. ಮುತ್ತಮ್ಮ, ನಂಜರಾಯಪಟ್ಟಣದ  ಶಿಕ್ಷಕಿ ಎ.ಜಿ. ಕುಸುಮಾ, ಮಡಿಕೇರಿ ಸಂತ ಜೋಸೆಫ‌ರ ಶಾಲೆಯ ರೀಟಾ ಫಿಲೋಮಿನಾ ಡಿ’ಸೋಜಾ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಸಾಂಸ್ಕೃತಿಕ  ಕಾರ್ಯಕ್ರಮ :  ಸಭಾ ಕಾರ್ಯಕ್ರಮದ ಬಳಿಕ ಸಂತ ಜೋಸೆಫ‌ರ ಕಾನ್ವೆಂಟ್‌, ಸಂತ ಮೈಕೆಲರ ಶಾಲೆ, ಕೇಂದ್ರೀಯ ವಿದ್ಯಾಲಯ ಮತ್ತು ರಾಜೇಶ್ವರಿ ವಿದ್ಯಾಲಯದ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಎಂಎಲ್‌ಸಿಗಳಾದ ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಪಂ ಅಧ್ಯಕ್ಷರಾದ ಬಿ.ಎ. ಹರೀಶ್‌, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್‌, ಮೇಕೇರಿ ತಾಪಂ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್‌, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ. ರಮೇಶ್‌, ಜಿಲ್ಲಾ ಕಸಾಪ ಅಧ್ಯಕ್ಷರಾದ ಲೋಕೇಶ್‌ ಸಾಗರ್‌, ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ, ಮಿಟ್ಟು ಚಂಗಪ್ಪ, ಡಿಎಫ್ಒ ಸೂರ್ಯಸೇನ್‌, ಎಸಿ ನಂಜುಂಡೇ ಗೌಡ, ಮೂಡ ಅಧ್ಯಕ್ಷ ಎ.ಸಿ. ದೇವಯ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next