Advertisement

ಮಡಿವಂತಿಕೆಯ ಮೂಸೆಯಲ್ಲಿ  ಮಡಿ !

01:07 PM Aug 16, 2018 | Team Udayavani |

ರಂಗಿತರಂಗ, ಒಂದು ಮೊಟ್ಟೆಯ ಕಥೆ ಹೀಗೆ ಒಂದೊಂದೇ ಸೂಪರ್‌ಹಿಟ್‌ ಸಿನೆಮಾ ನೀಡಿ ತುಳುನಾಡಿನ ಪ್ರತಿಭೆಗಳು ಮತ್ತೆ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಕಿರುಚಿತ್ರ ನಿರ್ಮಿಸುವ ಮೂಲಕ ಮತ್ತೊಂದು  ತಂಡ ಸದ್ದು ಮಾಡಿದೆ.

Advertisement

 ಇದು 25 ನಿಮಿಷಗಳ ಕನ್ನಡ ಕಿರು ಸಿನೆಮಾ. ಖ್ಯಾತ ಗಾಯಕಿ ಹಾಗೂ ನಟಿ ಎಂ.ಡಿ. ಪಲ್ಲವಿ ಅವರ ನೈಜ ಅಭಿನಯದ, ರಾಜ್ಯ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಸುಧೀರ್‌ ಅತ್ತಾವರ್‌ ನಿರ್ದೇಶನ ಮಾಡಿದ್ದಾರೆ. ಮಲಿನ ಮನಗಳ ಕ್ರೌರ್ಯ ಟ್ಯಾಗ್‌ ಲೈನ್‌ ಹೊಂದಿರುವ ‘ಮಡಿ’ ನಮ್ಮ ವ್ಯವಸ್ಥೆಯಲ್ಲಿ ಜೀವಂತವಾಗಿರುವ ಅಸ್ಪ್ರಶ್ಯತೆ, ಬಡತನವನ್ನು ಕಣ್ಣಿಗೆ ಯಥಾವತ್ತಾಗಿ ಕಟ್ಟಿಕೊಡುವ ಪ್ರಯತ್ನ ನಡೆದಿದೆ.  ಭೂತ ಕಟ್ಟಿದಾಗ ಎಲ್ಲರೂ ಅವರಿಗೆ ತಲೆಬಾಗುವ ರೀತಿ ಮತ್ತು ಅವರು ವೇಷ ಕಳಚಿದಾಗ ಅವರನ್ನು ಸಮಾಜ ನಡೆಸಿಕೊಳ್ಳುವ ನಡವಳಿಕೆಯನ್ನು ಬೇಸ್‌ ಆಗಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಅದನ್ನು ಬಂಟ್ವಾಳ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.

ಆಲ್ಬರ್ಟ್‌ ಜೊಸ್ಸಿ ಅರ್ಪಿಸಿರುವ ಸಕ್ಸಸ್‌ಫಿಲ್ಮ್ಸ್ ಮತ್ತು ಸೂರಜ್‌ ವಿಷುವಲ್ಸ್‌ ಪ್ರೊಡಕ್ಷನ್‌ನಲ್ಲಿ ಮೂಡಿಬಂದಿರುವ ‘ಮಡಿ’ಗೆ ಬಿ. ಎಸ್‌. ಶೆಟ್ಟಿ ಕೆಮ ರಾ ಕೈಚಳಕವಿದೆ. ರಾಮ್‌ದಾಸ್‌ ದೇವಾಡಿಗ, ಎಂ.ಡಿ. ಪಲ್ಲವಿ, ಮಾಸ್ಟರ್‌ ಸಂತೋಷ್‌, ರವೀಂದ್ರ ಶೆಟ್ಟಿ, ವೆಂಕಟ್‌ ರಾವ್‌, ಶ್ರೀವತ್ಸ, ನಿವೇದಿತಾ ಎನ್‌. ಶೆಟ್ಟಿ, ಗೋಪಾಲ್‌ ಮಡಂತ್ಯಾರ್‌, ವಿದ್ಯಾಧರ್‌ ಶೆಟ್ಟಿ, ಇಂದಿರಾ ಸೇನರೆ ಹಿತ್ಲು, ಅಮೀನ್‌ ಟೈಲರ್‌, ಚಾರ್ಲ್ಸ್‌ ಸೂರಜ್‌, ಸಾನು ಅಮೀನ್‌, ಶಾಂತಾ ಪಿ. ರೈ, ಪದ್ಮನಾಭ ಶೆಟ್ಟಿ, ಉಮೇಶ್‌ ಶೆಟ್ಟಿ ಅಂಬ್ಲಿಮೊಗರು ಮುಂತಾದವರು ಇದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next