ಮಧ್ಯಪ್ರದೇಶ : ಪತಿ ಮಹಾಶಯ ತನ್ನ ಪತ್ನಿಯನ್ನು ಕೊಲ್ಲಲು ರೂಪಿಸಿದ ಖೆಡ್ಡಾಕ್ಕೆ ಸಿಲುಕಿ ಅತ್ತೆ ಬಲಿಯಾದ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಸೈಖೇಡಾ ಗ್ರಾಮದಲ್ಲಿ ನಡೆದಿದೆ.
ಮಧ್ಯಪ್ರದೇಶದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೈಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು 55 ವರ್ಷದ ಮಹಿಳೆ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.
ಘಟನೆ ವಿವರ : ವಿಪರೀತ ಮದ್ಯಪಾನ ಮಾಡುತ್ತಿದ್ದ ಪತಿ ದಿನಂಪ್ರತಿ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದ ಅಲ್ಲದೆ, ತನ್ನ ಪತಿಯನ್ನು ಮದ್ಯಪಾನದ ಚಟದಿಂದ ಬಿಡಿಸಬೇಕೆಂದು ಪ್ರಯತ್ನ ನಡೆಸಿದ್ದಾಳೆ, ಆದರೆ ದಂಪತಿಗಳ ನಡುವೆ ಭಾನುವಾರವೂ ಕಲಹ ನಡೆದಿದೆ, ಇದರಿಂದ ಮನನೊಂದ ಪತ್ನಿ ತನ್ನ ತಾಯಿಯ ಮನೆಗೆ ಹೋಗಿದ್ದಾಳೆ, ಪತ್ನಿ ತನ್ನನ್ನು ಬಿಟ್ಟು ತಾಯಿ ಮನೆಗೆ ಹೋದ ವಿಚಾರದಲ್ಲಿ ಸಿಟ್ಟಿಗೆದ್ದ ಪತಿರಾಯ ಪತ್ನಿಯನ್ನು ಹೇಗಾದರೂ ಮಾಡಿ ಕೊಳ್ಳಬೇಕೆಂದು ಸಂಚು ರೂಪಿಸಿದ, ಅದರಂತೆ ಪತಿ, ತನ್ನ ಪತ್ನಿಯ ತಾಯಿ ಮನೆಗೆ ಹೋಗಿದ್ದಾನೆ, ಈ ವೇಳೆ ಅಲ್ಲಿ ಕಬ್ಬಿಣದ ಬಾಗಿಲನ್ನು ಗಮನಿಸಿದ್ದಾನೆ ಇದಕ್ಕೆ ವಿದ್ಯುತ್ ಸಂಪರ್ಕ ಕೊಟ್ಟು ಪತ್ನಿಯನ್ನು ಕೊಲ್ಲುವ ಉದ್ದೇಶ ಇಟ್ಟುಕೊಂಡು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿ ಬಾಗಿಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಏನೂ ಗೊತ್ತಿಲದವರಂತೆ ಹೊರಗೆ ಬಂದು ಕುಳಿತ್ತಿದ್ದಾನೆ ಆದರೆ ದುರದೃಷ್ಟವಶಾತ್ ಪತ್ನಿ ಹೋಗುವ ಬದಲಿಗೆ ಅತ್ತೆ ಆ ಬಾಗಿಲನ್ನು ಸ್ಪರ್ಶಿಸಿದ್ದಾರೆ ಗಂಭೀರ ಗಾಯಗೊಂಡ ಅತ್ತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯ್ತಿದ್ದಂತೆ ಪತಿ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬಿಸಿದ್ದಾರೆ.
ಇದನ್ನೂ ಓದಿ : ಚಾಲಕ-ನಿರ್ವಾಹಕರ ಕೊರತೆ; ಗ್ರಾಮೀಣ ಭಾಗದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕಡಿತ