Advertisement
ಪಟ್ಟಣದ ಎಂ.ಎಸ್.ರಾಮಯ್ಯ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗೂ ಇತರರ ಸಹಕಾರದಲ್ಲಿ ನಡೆದ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮಗೆ ಶಿಬಿರದ ಮೊದಲು ಇದ್ದ ಮನಸ್ಥಿತಿ ಬದಲಾಗಿದ್ದು, ಹೊಸ ಬದುಕು ಸಿಕ್ಕಿದೆ. ನಿಮ್ಮ ಈ ಬದಲಾವಣೆಗೆ ಹಲವರು ಕಾರಣರಾಗಿದ್ದು, ನೀವೂ ಕೂಡ ಮದ್ಯಮುಕ್ತ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಮನವಿ ಮಾಡಿದರು.
Related Articles
Advertisement
ಈ ಸಂದರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ಶಿಬಿರದ ತರಬೇತುದಾರ ಕುಮಾರ್, ಗಣೇಶ್ ಆಚಾರ್ಯ ಮಾತನಾಡಿದರು. ಮುಖಂಡರಾದ ತುಂಗೋಟಿ ರಾಮಣ್ಣ, ಎಂ.ಜಿ.ಶ್ರೀನಿವಾಸಮೂರ್ತಿ, ಜನಜಾಗೃತಿ ವೇದಿಕೆ ಸದಸ್ಯರಾದ ಮಂಜುನಾಥ್, ಸಂಜೀವಗೌಡ, ಕಸಾಪ ಅಧ್ಯಕ್ಷೆ ಸಹನಾ, ತಾಲೂಕು ಯೋಜನಾಧಿಕಾರಿ ದಿನೇಶ್ ಕುಮಾರ್, ಮ್ಯಾನೇಜರ್ ಗಂಗಾಧರ್, ಕೃಷಿ ಮೇಲ್ವಿಚಾರಕ ಭಾನುಪ್ರಕಾಶ್, ವಲಯ ಮೇಲ್ವಿಚಾರಕಿ ಅನಿತಾ, ಸೇವಾ ಪ್ರತಿನಿಧಿಗಳು ಹಾಗೂ ವ್ಯಸನ ಮುಕ್ತರ ಕುಟುಂಬದವರು ಭಾಗವಹಿಸಿದ್ದರು.
ಒಂದೇ ಕುಟುಂಬದ 11 ಮಂದಿ ಭಾಗಿ : ಶಿಬಿರದಲ್ಲಿ 74 ಮಂದಿ ಮದ್ಯಮುಕ್ತರಾಗಿದ್ದು, 1 ಸರ್ಕಾರಿ ನೌಕರರು ಇದ್ದರು. 21ನೇ ವಯಸ್ಸಿನಿಂದ 63 ವರ್ಷದ ವ್ಯಕ್ತಿಗಳು, ಒಂದೇ ಕುಟುಂಬದ 11 ಮಂದಿ ಭಾಗವಹಿಸಿದ್ದು ಮದ್ಯ ವ್ಯಸನ ತ್ಯಜಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವ್ಯಸನಿಗಳ ಪರವಾಗಿ ಮಾತನಾಡಿದ ಹನುಮಂತರಾಜ್, ಹಿಂದಿನ ಜನ್ಮ ಕಳೆದು ಈಗ ಮರುಜನ್ಮ ಪಡೆದಿದ್ದೇವೆ. ಇದಕ್ಕಾಗಿ ಪೂಜ್ಯರಿಗೆ ವಂದನೆಗಳು ಎಂದರು.
ಮೊದಲ ಬಾರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ, ಲಾಟರಿ, ಜೂಜು ನಿಷೇಧ ಮಾಡಿದ್ದರು. ಎರಡನೇ ಬಾರಿ ಸಿಎಂ ಆದಾಗ ಆ ದಂಧೆಯ ಜನರೆಲ್ಲ ಸೇರಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದರು. –ಎಂ.ವಿ.ವೀರಭದ್ರಯ್ಯ, ಶಾಸಕ