ಗ್ವಾಲಿಯರ್ (ಮಧ್ಯಪ್ರದೇಶ): ಕೊರೊನಾ ಸೋಂಕಿನಿಂದ ಬಚಾವಾಗಲು ಮಾಸ್ಕ್ ಧರಿಸಿ ಎಂದು ಸರ್ಕಾರ ಸೂಚನೆ ನೀಡಿದೆ. ಅದನ್ನೂ ಹೇಗೆಲ್ಲ ದುರುಪಯೋಗ ಮಾಡಿಕೊಳ್ಳಬಹುದು ಎಂದು ಖದೀಮ ಕಳ್ಳರು ತೋರಿಸುತ್ತಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮೊನ್ನೆ ಶನಿವಾರ ಮಾಸ್ಕ್ ಧರಿಸಿ ಬಂದ ಕಳ್ಳನೊಬ್ಬ ಮೊದಲು ವಧುವಿನೊಂದಿಗೆ ಚಿತ್ರ ತೆಗೆಸಿಕೊಂಡಿದ್ದಾನೆ. ನಂತರ ವಧುವಿನ ಪಕ್ಕದಲ್ಲಿದ್ದ ನಗದು, ಆಭರಣಗಳಿಂದ ಕೂಡಿದ್ದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾನೆ!
ಈಗ ಪೊಲೀಸರು ಆತನನ್ನು ಹಿಡಿಯಲು ಪರದಾಡುತ್ತಿದ್ದಾರೆ. ಅಂದ ಹಾಗೆ ಕಳೆದ 15 ದಿನಗಳಲ್ಲಿ ಗ್ವಾಲಿಯರ್‌ನಲ್ಲಿ ನಡೆದ ಈ ರೀತಿಯ ಮೂರನೇ ಪ್ರಕರಣವಿದು.
ಇದನ್ನೂ ಓದಿ:ಗೋವಾ ಚುನಾವಣೆ : ಶೇ 78.94% ಮತದಾನ, ಮಾರ್ಚ್ 10 ಕ್ಕೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಆಗಿದ್ದೇನು?: ಶನಿವಾರ ರಾತ್ರಿ ಗ್ವಾಲಿಯರ್‌ನ ಸಂಗಮ್ ವಾಟಿಕ ಮದುವೆ ಸಭಾಂಗಣದಲ್ಲಿ ವಿವಾಹ ನಡೆಯುತ್ತಿತ್ತು. ಆಗ ಮಾಸ್ಕ್ ಧರಿಸಿ ಕಳ್ಳ ಬಂದಿದ್ದಾನೆ. ತೀರಾ ಆತ್ಮೀಯನೋ ಎಂಬಂತೆ ನಟಿಸುತ್ತಾ ವಧುವಿನ ಪಕ್ಕದಲ್ಲಿ ನಿಂತು ಚಿತ್ರ ತೆಗೆಸಿಕೊಂಡಿದ್ದಾನೆ. ಆ ವೇಳೆ ವಧುವಿನ ಪಕ್ಕದಲ್ಲಿದ್ದ ಬ್ಯಾಗನ್ನು ಎತ್ತಿ ವಧುವಿನ ಕುರ್ಚಿಯ ಹಿಂದಿಟ್ಟಿದ್ದಾನೆ. ಆ ಬ್ಯಾಗ್ ಚಿತ್ರ ತೆಗೆಸಿಕೊಳ್ಳಲು ಅಡ್ಡಿಯಾಗುತ್ತೆ ಎನ್ನುವಂತೆ ಆತ ಹಾವಭಾವ ಮಾಡಿದ್ದಾನೆ. ಎಲ್ಲ ಮುಗಿದ ಈತ ನಿಧಾನಕ್ಕೆ ಬ್ಯಾಗ್ ಎತ್ತಿಕೊಂಡು ಆರಾಮಾಗಿ ಮದುವೆ ಮಂಟಪ ದಾಟಿ ಹೊರಹೋಗಿದ್ದಾನೆ! ಆಮೇಲೆ ನೀಡಿದ ದೂರಿನ ಪ್ರಕಾರ ಆ ಬ್ಯಾಗ್‌ನಲ್ಲಿ 1 ಲಕ್ಷ ರೂ. ನಗದು, 2 ಲಕ್ಷ ರೂ. ಮೌಲ್ಯದ ಆಭರಣವಿದ್ದದ್ದು ಗೊತ್ತಾಗಿದೆ.