Advertisement

Madhya Pradesh;ಜು.15ಕ್ಕೆ ಭೋಜಶಾಲಾ ಸಮೀಕ್ಷೆಯ ವರದಿ ಸಲ್ಲಿಸಿ: ಹೈಕೋರ್ಟ್‌

12:18 AM Jul 05, 2024 | Team Udayavani |

ಭೋಪಾಲ್‌: ಮಧ್ಯಪ್ರದೇಶದ ವಿವಾದಿತ ಭೋಜ ಶಾಲಾ-ಕಮಲ್‌ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆ ವರದಿಯನ್ನು ಸಲ್ಲಿಸಲು ಭಾರತೀಯ ಪುರಾ ತತ್ವ ಇಲಾಖೆಗೆ (ಎಎಸ್‌ಐ) ಗುರುವಾರ ಮಧ್ಯ ಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠವು 10 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ. 3 ತಿಂಗಳಿ ನಿಂದ ಸಮೀಕ್ಷೆಯ ಪೂರ್ಣ ವರದಿಯನ್ನು ಜು.15 ರಂದು ಸಲ್ಲಿಸುವಂತೆ ಆದೇಶಿಸಿದೆ. ಪೀಠದ ಹಿಂದಿನ ಆದೇಶದಂತೆ ಜು.2ರಂದೇ ಎಎಸ್‌ಐ ಸಮೀಕ್ಷೆ ವರದಿಯನ್ನು ಸಲ್ಲಿಸಬೇಕಿತ್ತು. ಆದರೆ ಸಮೀಕ್ಷೆ ವೇಳೆ ಸಂಗ್ರಹಿಸಿರುವ ದಾಖಲೆಗಳ ಪರಿಶೀಲನೆಗೆ ಹೈದರಾ ಬಾದ್‌ ಮೂಲದ ಸಂಶೋಧನ ಸಂಸ್ಥೆ ಎನ್‌ಜಿಆರ್‌ ಐ 3 ವಾರಗಳ ಹೆಚ್ಚಿನ ಸಮಯ ಕೋರಿದೆ ಹಾಗಾಗಿ ಹೆಚ್ಚಿನ ವರದಿ ಸಲ್ಲಿಕೆಯ ಗಡುವು ವಿಸ್ತರಿಸಬೇಕೆಂದು ಎಎಸ್‌ಐ ಅರ್ಜಿ ಸಲ್ಲಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next