Advertisement

Madhya Pradesh: ವಿದಿಶಾದಲ್ಲಿ ಮಂದಿರ-ಮಸೀದಿ ವಿವಾದ

01:34 AM Aug 10, 2024 | Team Udayavani |

ವಿದಿಶಾ: ಕಾಶಿ, ಮಥುರಾ ಸೇರಿದಂತೆ ದೇಶದ ಹಲವೆಡೆ ಮಂದಿರ-ಮಸೀದಿ ವಿವಾದ ನಡೆಯುತ್ತಿರುವಂತೆಯೇ ಮಧ್ಯಪ್ರದೇಶದ ವಿದಿಶಾದಲ್ಲಿ ಹೊಸ ವಿವಾದ ತಲೆಯೆತ್ತಿದೆ. ಪುರಾತತ್ವ ಇಲಾಖೆಗೆ (ಎಎಸ್‌ಐ) ಸೇರಿದ ಬಿಜಮಂಡಲ ದೇಗುಲದೊಳಗೆ ನಾಗರಪಂಚಮಿ ಹಿನ್ನೆಲೆಯಲ್ಲಿ ಶುಕ್ರವಾರ ಹಿಂದೂ ಗುಂಪೊಂದು ಪೂಜೆ ಮಾಡಲು ಅನುಮತಿ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಐ, ಅದು ದೇಗುಲವಲ್ಲ, ಮಸೀದಿ ಎಂದಿದೆ.

Advertisement

ಅದರಂತೆ, ಜಿಲ್ಲಾಡಳಿತವೂ ಪೂಜೆಗೆ ಅವಕಾಶ ನಿರಾಕರಿಸಿದೆ. ಇದರಿಂದ ಹಿಂದೂ ಗುಂಪುಗಳು ಆಕ್ರೋಶಗೊಂಡಿವೆ.
ಪ್ರತೀ ವರ್ಷ ನಾಗರ ಪಂಚಮಿಯಂದು ಬಿಜಮಂಡಲ (ವಿಜಯಮಂದಿರ) ದೇಗುಲದ್ದು ಎನ್ನಲಾದ ಬುನಾದಿಯ ಹೊರಭಾಗದಲ್ಲಿ ಹಿಂದೂಗಳು ಪೂಜೆ ಮಾಡುತ್ತಾರೆ. ಈ ಬುನಾದಿ ಸಂಪೂರ್ಣ ಹಿಂದೂ ಮಂದಿರದ ರಚನೆಯನ್ನೇ ಹೋಲುತ್ತದೆ. ಈ ವರ್ಷ ಮಸೀದಿ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸಲಾಗಿದೆ. ಮೂಲಗಳ ಪ್ರಕಾರ ವಿಜಯಮಂದಿರವನ್ನು 11ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. 17ನೇ ಶತಮಾನದಲ್ಲಿ ಮುಘಲ್‌ ಸುಲ್ತಾನನೊಬ್ಬ ಮಂದಿರ ಒಡೆದು, ಮಸೀದಿ ನಿರ್ಮಿಸಿದ್ದಾನೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next