ಭೋಪಾಲ್: ಮದುವೆಯಾಗಲು ವಧು ಸಿಗದ ಕಾರಣಕ್ಕೆ ಯುವಕನೊಬ್ಬ ವಿಶಿಷ್ಟ ವಿಧಾನವನ್ನು ಅನುಸರಿಸಿ ವಧುವನ್ನು ಹುಡುಕುವ ಪ್ರಯತ್ನಕ್ಕೆ ಮುಂದಾಗಿದ್ದಾನೆ.
ಮಧ್ಯಪ್ರದೇಶದ ದಾಮೋಹ್‌ನಲ್ಲಿರುವ 29 ವರ್ಷದ ದೀಪೇಂದ್ರ ರಾಥೋಡ್ ಅವರು ಕಳೆದ ಕೆಲ ಸಮಯದಿಂದ ವಧು ಹುಡುಕುತ್ತಿದ್ದಾರೆ. ಆದರೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುವ ನನಗೆ ವಧು ಸಿಗಲಿಲ್ಲ. ಮಾತುಕತೆಯಾದ ಹುಡುಗಿಯರು ಹಣ -ಆಸ್ತಿ ಬಗ್ಗೆ ವಿಚಾರ ಮಾಡಿದರು ಎಂದು ದೀಪೇಂದ್ರ ಹೇಳುತ್ತಾರೆ.
ಒಂದಷ್ಟು ವಧು ಹುಡುಕಿದ ಬಳಿಕ ವಧು ಸಿಗದ ಕಾರಣ, ದೀಪೇಂದ್ರ ಮ್ಯಾರೇಜ್ ಗ್ರೂಪ್ ವೊಂದಕ್ಕೆ ಸೇರಿದ್ದಾರೆ. ಆದರೆ ಅಲ್ಲೂ ಕೂಡ ಅವರಿಗೆ ದಾಮೋಹ್‌ನಿಂದ ವಧು ಸಿಗಲಿಲ್ಲ. ಈ ಕಾರಣದಿಂದ ಅವರು ತನ್ನ ಇ – ರಿಕ್ಷಾ ಆಟೋಗೆ ಹೋರ್ಡಿಂಗ್ ವೊಂದನ್ನು ಹಾಕಿ ಅದರಲ್ಲಿ ತಮ್ಮ ಬಯೋಡೇಟಾವನ್ನು ಲಗತ್ತಿಸಿದ್ದಾರೆ. ಇದರಲ್ಲಿ ತಮ್ಮ ಫೋಟೋದೊಂದಿಗೆ ಎತ್ತರ, ತೂಕ, ಶೈಕ್ಷಣಿಕ ಅರ್ಹತೆಗಳು, ಜನ್ಮ ದಿನಾಂಕವನ್ನು ಹಾಕಿದ್ದಾರೆ.
ನನ್ನ ಪೋಷಕರು ಕೂಡ ನನ್ನ ಈ ಹೆಣ್ಣು ಹುಡುಕುವ ವಿಧಾನಕ್ಕೆ ಬೆಂಬಲಿಸಿದ್ದಾರೆ ಎಂದು ದೀಪೇಂದ್ರ ಅವರು ಹೇಳುತ್ತಾರೆ.
ನಾನೀಗ ದಾಮೋಹ್‌ನಿಂದ ಮಾತ್ರವಲ್ಲದೆ, ಬೇರೆ ಪ್ರದೇಶದ ಹುಡುಗಿಯನ್ನು ಮದುವೆಯಾಗಲು ಸಿದ್ದವಾಗಿದ್ದೇನೆ ಎಂದು ದೀಪೇಂದ್ರ ಹೇಳಿದ್ದಾರೆ.