Advertisement

Dowry Demand: ವರದಕ್ಷಿಣೆ ಬೇಡಿಕೆಯಿಟ್ಟು ಪತ್ನಿಯನ್ನು ಬಾವಿಯಲ್ಲಿ ನೇತು ಹಾಕಿದ ಪತಿ.!

11:39 AM Sep 06, 2023 | Team Udayavani |

ಭೋಪಾಲ್:‌ ಪತಿಯೊಬ್ಬ ಪತ್ನಿಯನ್ನು ಬಾವಿಯಲ್ಲಿ ನೇತು ಹಾಕಿ ವರದಕ್ಷಿಣೆಗೆ ಬೇಡಿಕೆಯಿಟ್ಟ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

Advertisement

ಆಗಸ್ಟ್‌ 20 ರಂದು ಮಧ್ಯ ಪ್ರದೇಶದ ನೀಮಚ್‌ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರಾಕೇಶ್ ಕಿರ್ ಎಂಬ ವ್ಯಕ್ತಿ ಪತ್ನಿಯಲ್ಲಿ ವರದಕ್ಷಿಣೆಗಾಗಿ ಬೇಡಿಕೆಯಿಟ್ಟು ಈ ಕೃತ್ಯವೆಸಗಿದ್ದಾನೆ. ಪತ್ನಿ ಉಷಾಳನ್ನು ಬಾವಿಯಲ್ಲಿ ನೇತು ಹಾಕಿ, ಅದನ್ನು ಚಿತ್ರೀಕರಿಸಿ ಪತ್ನಿ ಮನೆಯವರಿಗೆ ಕಳುಹಿಸಿದ್ದಾನೆ.

ಇದನ್ನೂ ಓದಿ: FIR: ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಸ್ಟಾಲಿನ್, ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್‌ಐಆರ್

5 ಲಕ್ಷ ರೂ. ವರದಕ್ಷಿಣೆಯಾಗಿ ನೀಡಬೇಕೆಂದು ಬೇಡಿಯಿಟ್ಟಿದ್ದಾನೆ. ಉಷಾಳ ಮನೆಯವರು ವಿಡಿಯೋ ನೋಡಿ ಅದೇ ಗ್ರಾಮದ ಕೆಲವರಿಗೆ ಹೇಳಿ ಮಗಳನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿದ್ದು, ಪೊಲೀಸರು ಆ ಬಳಿಕ ರಾಕೇಶ್‌ ನನ್ನು ಬಂಧಿಸಿದ್ದಾರೆ.

Advertisement

ಆರೋಪಿ 5 ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಈ ಕೃತ್ಯವನ್ನುವೆಸಗಿದ್ದಾನೆ ಎಂದು  ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next