Advertisement

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

08:32 PM Aug 18, 2022 | Team Udayavani |

ಭೋಪಾಲ್‌: ಮಗಳು ಹುಟ್ಟಿ ಒಂದು ವರ್ಷವಾದ ಸಂಭ್ರಮವನ್ನು ಮಧ್ಯಪ್ರದೇಶದ ಕೋಲಾರದ ಪಾನಿಪುರಿ ವ್ಯಾಪಾರಿಯೊಬ್ಬ ಉಚಿತ ಪಾನಿಪುರಿ ಹಂಚುವ ಮೂಲಕ ಆಚರಿಸಿದ್ದಾನೆ.

Advertisement

ಬರೋಬ್ಬರಿ 1.01 ಲಕ್ಷ ಉಚಿತ ಪಾನಿಪುರಿ ಹಂಚುವ ಮೂಲಕ ಆತ ಎಲ್ಲರ ಗಮನ ಸೆಳೆದಿದ್ದಾನೆ. ಬಂಜಾರಿ ಮೈದಾನದಲ್ಲಿ ಬುಧವಾರ ದೊಡ್ಡದೊಂದು ಟೆಂಟ್‌ ಹಾಕಿ ಅದರಲ್ಲಿ 21 ಅಂಗಡಿಗಳಲ್ಲಿ ಉಚಿತ ಪಾನಿಪುರಿ ಹಂಚಲಾಗಿದೆ. “ಹೆಣ್ಣು ಮಕ್ಕಳನ್ನು ಉಳಿಸಿ, ಅವರಿಗೆ ಶಿಕ್ಷಣ ಕೊಡಿಸಿ’ ಎನ್ನುವ ಸಂದೇಶವನ್ನು ಸಾರುವ ಸಲುವಾಗಿ ಈ ರೀತಿಯ ಉಚಿತ ಪಾನಿಪುರಿ ಯೋಜನೆ ಹಾಕಿಕೊಂಡಿದ್ದಾಗಿ ಹೇಳಿದ್ದಾರೆ ಒಂದು ವರ್ಷದ ಹೆಣ್ಣು ಮಗುವಿನ ತಂದೆ ಆಂಚಲ್‌ ಗುಪ್ತಾ.

ಈ ಸಂಭ್ರಮದಲ್ಲಿ ಶಾಸಕ ರಾಮೇಶ್ವರ ಶರ್ಮಾ ಅವರೂ ಭಾಗಿಯಾಗಿದ್ದು, ಆಂಚಲ್‌ ಅವರ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕೂಡ ಕೊಂಡಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next