ಭೋಪಾಲ್: ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಾರಿಸಲಾದ ಗಾಳಿಪಟದ ದಾರ ಕುತ್ತಿಗೆ ಕೊಯ್ದಿದ್ದರಿಂದಾಗಿ 20 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಯುವತಿ ಸ್ಕೂಟರ್‌ನಲ್ಲಿ ಬರುತ್ತಿದ್ದಾಗ, ಆಕೆಯ ಕುತ್ತಿಗೆಗೆ ಗಾಳಿಪಟದ ದಾರ ಸಿಕ್ಕಿಬಿದ್ದಿದೆ. ಆ ದಾರ ಪೌಡರ್ಡ್ ಗ್ಲಾಸ್ ಕೋಟ್ ಇದ್ದಂತಹ ಚೈನೀಸ್ ದಾರವಾಗಿದ್ದರಿಂದ, ದಾರ ತುಂಡಾಗದೆ, ಯುವತಿಯ ಕುತ್ತಿಗೆಯನ್ನು ಸೀಳಿದೆ.
ಅಧಿಕ ರಕ್ತಸ್ರಾವವಾಗಿ ಯುವತಿ ಸಾವನ್ನಪ್ಪಿದ್ದಾಳೆ. ಇದೇ ರೀತಿ ಶುಕ್ರವಾರ ಗುಜರಾತ್‌ನಲ್ಲಿ ಗಾಳಿಪಟ ಹಾರಿಸಲಾಗಿದ್ದು, ಅದರಿಂದಾಗಿ 451 ಜನರು ಗಾಯಾಳುಗಳಾಗಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇವಲ 24,000 ಪ್ರೇಕ್ಷಕರಿಗೆ ಮಾತ್ರ ಅವಕಾಶ