Advertisement

ಮಧ್ಯಪ್ರದೇಶದಲ್ಲಿ ಜಾರಿಯಾಗಲಿದೆ ‘ಗೋ ಸೆಸ್’‌! ಗೋ ಸಂಪುಟ ಸಭೆಯಲ್ಲಿ ತೀರ್ಮಾನ

06:09 PM Nov 23, 2020 | sudhir |

ಭೋಪಾಲ: ಮಧ್ಯಪ್ರದೇಶದಲ್ಲಿ 4 ಸಾವಿರ ಗೋಶಾಲೆಗಳ ನಿರ್ಮಾಣಕ್ಕೆ “ಕೌ ಸೆಸ್‌'( ಗೋ ಸೆಸ್‌) ವಿಧಿಸಲು ತೀರ್ಮಾನಿಸಿದೆ.

Advertisement

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದಲ್ಲಿ ಭಾನುವಾರ ನಡೆದ ಮೊದಲ “ಗೋ ಸಂಪುಟ’ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದನ್ನು ಖಾಸಗಿ – ಸರ್ಕಾರಿ ಸಹಭಾಗಿತ್ವದಲ್ಲಿ ನಿರ್ಮಿಸುವ ನಿರ್ಧಾರಕ್ಕೆ ಬರಲಾಗಿದೆ.

ಗೋಶಾಲೆಯಲ್ಲಿಯೇ ಬೆರಣಿ, ಹಾಲಿನ ಪುಡಿ ಸೇರಿದಂತೆ ಹಲವು ಉಪ ಉತ್ಪನ್ನಗಳನ್ನು ಖಾಸಗಿ ಸಹ ಭಾಗಿತ್ವದಲ್ಲಿ ತಯಾರಿಸುವುದರ ಬಗ್ಗೆಯೂ ಸಮ್ಮತಿ ಸೂಚಿಸಲಾಗಿದೆ.

ಗೋ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಚೌಹಾಣ್‌ ಅಗರ್‌-ಮಾಲ್ವಾ ಸಮೀಪ ಇರುವ ಸಲಾರಿಯಾ ಗ್ರಾಮದಲ್ಲಿರುವ ದೇಶದ ಮೊದಲ ಗೋ ಅಭಯಾರಣ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಚೌಹಾಣ್‌ “ಗೋ ಶಾಲೆ ನಿರ್ಮಿಸಲು ಮತ್ತು ಅದರ ನಿರ್ವಹಣೆಗಾಗಿ ಗೋ ಸೆಸ್‌ ವಿಧಿಸಲು ತೀರ್ಮಾನಿಸಲಾಗಿದೆ’ ಎಂದರು.

ಇದನ್ನೂ ಓದಿ:ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಆರೋಗ್ಯ ಮತ್ತಷ್ಟು ಗಂಭೀರ

Advertisement

ಇದರ ಜತೆಗೆ ಸಭೆಯಲ್ಲಿ ಗೋವಿಗೆ ತಾಯಿಯ ಸ್ಥಾನ ನೀಡುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ. ಜತೆಗೆ ಅಡುಗೆ ಮನೆಯಲ್ಲಿ ಸಗಣಿಯ ಬೆರಣಿಗಳನ್ನು ಬಳಕೆ ಮಾಡುವುದಕ್ಕೆ, ಗೋ ಮೂತ್ರವನ್ನು ವೈದ್ಯಕೀಯ ಬಳಕೆಗೆ ಮತ್ತು ಕೀಟನಾಶಕಗಳ ಸ್ಥಾನದಲ್ಲಿ ಬಳಕೆ ಮಾಡುವುದರ ಬಗ್ಗೆ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next