Advertisement
ಶನಿವಾರ ಸಚಿವ ಸಂಪುಟಕ್ಕೆ ಸೇರಿದ ಹಿರಿಯ ಶಾಸಕರಾದ ಗೌರಿಶಂಕರ್ ಬಿಸೇನ್ ಮತ್ತು ರಾಹುಲ್ ಲೋಧಿ ಅವರು ಮಧ್ಯಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.45 ಇರುವ ಇತರ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್ ಮತ್ತು ಬಿಜೆಪಿಗೆ ಆ ಸಮುದಾಯವನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಬಿಜೆಪಿ ವರಿಷ್ಠರು ಕೂಡ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆಯನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಅದಕ್ಕೆ ಅನುಸಾರವಾಗಿ ಈ ವಿಸ್ತರಣೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಹಲವು ಪ್ರಮುಖ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಥ ನಿರ್ಧಾರಕ್ಕೆ ಮುಖ್ಯಮಂತ್ರಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಬಲಗೈ ಬಂಟ ಎಂಬ ಹೇಳಿಕೆಗೆ ಪಾತ್ರರಾಗಿದ್ದ ಸಮಂದರ್ ಪಟೇಲ್ ಅವರು 1,200 ಕಾರುಗಳಲ್ಲಿ ಬೆಂಬಲಿಗರ ಜತೆಗೆ ಬಂದು ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.
Advertisement
Madhya Pradesh ಮೂರೇ ತಿಂಗಳಿರುವಾಗ ಸಂಪುಟ ವಿಸ್ತರಣೆ: ಸಿಎಂ ಶಿವರಾಜ್ ಸಿಂಗ್ ಚೌಹಾಣ್
09:44 PM Aug 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.