Advertisement

ಕಮಲ್‌ನಾಥ್‌ ಹೊರಗಿನ ಬೆಂಕಿ

08:11 AM Dec 19, 2018 | |

ನವದೆಹಲಿ: ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಮಲ್‌ನಾಥ್‌ ಅವರು, “ಒಳಗಿನ’ ಮತ್ತು “ಹೊರಗಿನ’ ಕಿಡಿ ಹಚ್ಚಿದ್ದು, ಕಾಂಗ್ರೆಸ್‌ನ ಮಿತ್ರಪಕ್ಷಗಳೇ ಅಸಮಾಧಾನ ವ್ಯಕ್ತಪಡಿಸಿವೆ. ಸೋಮವಾರದ ಪ್ರಮಾಣ ವಚನ ಸಮಾರಂಭದ ಬಳಿಕ ಮಧ್ಯಪ್ರದೇಶದ ಜನರಿಗೆ ಶೇ.70 ರಷ್ಟು ಉದ್ಯೋಗ ಕೊಡುವ ಉದ್ಯಮಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದಿದ್ದರು.

Advertisement

ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷದ ನಾಯಕರು, ಇಂಥ ಹೇಳಿಕೆಗಳು ಸಲ್ಲದು ಎಂದಿದ್ದಾರೆ. ಕಮಲ್‌ನಾಥ್‌ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂಬುದು ಬಿಜೆಪಿ ನಾಯಕರ ಆರೋಪ. ಅಲ್ಲದೆ, ಮಧ್ಯ ಪ್ರದೇಶದವರ ಉದ್ಯೋಗಗಳನ್ನು ಉತ್ತರ ಪ್ರದೇಶ ಮತ್ತು ಬಿಹಾರದವರು ಕಿತ್ತು ಕೊಳ್ಳುತ್ತಿದ್ದಾರೆ ಎಂದು ಹೇಳಿರುವುದು ಒಪ್ಪುವ ಮಾತಲ್ಲ ಎಂದಿದ್ದಾರೆ. ಕಮಲ್‌ನಾಥ್‌ ಹೇಳಿಕೆ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಕ್ಷಮೆ ಕೋರಬೇಕು ಎಂದಿದ್ದಾರೆ.

ಇನ್ನು ಬಿಹಾರದಲ್ಲಿನ ಕಾಂಗ್ರೆಸ್‌ ಮಿತ್ರ ಪಕ್ಷ ಆರ್‌ಜೆಡಿ ಕೂಡ ಹೇಳಿಕೆಯನ್ನು ಖಂಡಿಸಿದೆ. ಪ್ರಮುಖವಾಗಿ ಎಸ್ಪಿ ನಾಯಕ ಅಖೀಲೇಶ್‌
ಯಾದವ್‌ ಅವರು, ಕಮಲ್‌ನಾಥ್‌ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದವರನ್ನು ಮೊದಲು ಮುಂಬೈನಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು. ಬಳಿಕ ದೆಹಲಿಯಲ್ಲೂ ಇದೇ ಮನೋಭಾವ ಬಂತು. ಈಗ ಮಧ್ಯಪ್ರದೇಶದಲ್ಲೂ ನಮ್ಮ ಜನರನ್ನು ಹೊರಗಿನವರು ಎಂದು ಪರಿಗಣಿಸಲಾಗುತ್ತಿದೆ. ಹೋಗಲಿ, ಉತ್ತರದಲ್ಲಿರುವ ನಾವು ಮಧ್ಯಭಾಗಕ್ಕೆ ಹೋಗಲು ಯಾರನ್ನು ಕೇಳಬೇಕು, ನೀವೇ ಹೇಳಿ ಎಂದು ಸಿಟ್ಟಿನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next