ಭೂಪಾಲ್: ಮಧ್ಯಪ್ರದೇಶದಲ್ಲಿ ಬುಧವಾರ ವಿಧಾನಸಭಾ ಚುನಾವಣಾ ಮತದಾನ ನಡೆಯುತ್ತಿದ್ದು, ಹಿಂಸಾಚಾರವಾಗಿರುವ ಬಗ್ಗೆ ವರದಿಯಾಗಿದೆ.
ಸೆಂಧ್ವಾ ವಿಧಾನಸಭಾ ಕ್ಷೇತ್ರದ ಝಾಪ್ಡಿ ಪಾಡ್ಲಾ ಪ್ರದೇಶದಲ್ಲಿ ಸ್ಥಳೀಯರ ನಡುವೆ ಘರ್ಷಣೆ ನಡೆದಿದ್ದು, ಇಬ್ಬರಿಗೆ ಬೆಂಕಿ ಹಚ್ಚಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಚುನಾವಣಾ ಅಧಿಕಾರಿಯೊಬ್ಬರು ಹೃದಯಾಘಾತದಿಂದ ನಿಧನಹೊಂದಿದರೆ, ಇನ್ನೊಂದೆಡೆ ಅಧಿಕಾರಿಯೊಬ್ಬರು ಹೃದಯಾಘಾತಕ್ಕೆ ಗುರಿಯಾಗಿ ಕುಸಿದು ಬಿದ್ದ ಬಗ್ಗೆ ವರದಿಯಾಗಿದೆ. ಗುನಾದಲ್ಲಿ ಸೋಹಮ್‌ಲಾಲ್ ಮೃತಪಟ್ಟಿದ್ದು, ಕೈಲಾಷ್ ಪಟೇಲ್ ಎನ್ನುವ ಅಧಿಕಾರಿ ಹೃದಯಾಘಾತಕ್ಕೆ ಗುರಿಯಾಗಿದ್ದಾರೆ.
ಹಲವೆಡೆ ಇವಿಎಂಗಳು ಅಸಮರ್ಪಕವಾಗಿ ಕಾರ್ಯ ನಿರ್ವಹಣೆ ತೋರಿದ ಬಗ್ಗೆ ವರದಿಯಾಗಿದ್ದು, ಮತದಾನಕ್ಕೆ ತೊಂದರೆಯಾಗಿದೆ.
230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ 2,907 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇಂದು ಮತದಾರರು ಅವರ ಭವಿಷ್ಯ ನಿರ್ಧರಿಸಲಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.