Advertisement

ಕೊನೆ ಹಂತದಲ್ಲಿ ಮುನ್ನಡೆ ಸಾಧಿಸಿಕೊಂಡ ಮಧ್ಯಪ್ರದೇಶ: ರಾಜ್ಯ ಕಾ.ಫೈನಲ್‌ ಗೆ ಹಿನ್ನಡೆ

09:32 AM Feb 08, 2020 | keerthan |

ಶಿವಮೊಗ್ಗ: ಆದಿತ್ಯ ಶ್ರೀವಾಸ್ತವ (192 ರನ್‌) ಪ್ರಚಂಡ ಬ್ಯಾಟಿಂಗ್‌ನಿಂದ ಆತಿಥೇಯ ಕರ್ನಾಟಕ ವಿರುದ್ಧ ರಣಜಿ ಎಲೈಟ್‌ ಎ ಮತ್ತು ಬಿ ಗುಂಪಿನ ಲೀಗ್‌ ಪಂದ್ಯದಲ್ಲಿ ಮಧ್ಯಪ್ರದೇಶ 1ನೇ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟಾರೆ
4 ದಿನಗಳ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದ್ದು ರಾಜ್ಯ ತಂಡ ಇನಿಂಗ್ಸ್‌ಗೆ ಹಿನ್ನಡೆ ತುತ್ತಾಗಿದೆ, ಮಾತ್ರವಲ್ಲ ಮುಂದಿನ ಕ್ವಾರ್ಟರ್‌ ಫೈನಲ್‌ ಕನಸಿಗೆ ಹಿನ್ನಡೆ ಎದುರಾಗಿದೆ.

Advertisement

ಇಲ್ಲಿನ ನವುಲೆ ಕ್ರೀಡಾಂಗಣದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಪಂದ್ಯದ ಕೊನೆಯ ದಿನದ ಆಟದಲ್ಲಿ ಆದಿತ್ಯ ಶ್ರೀವಾಸ್ತವ ಹಾಗೂ ಕುಲದೀಪ್‌ ಸೆನ್‌ (ಅಜೇಯ 23 ರನ್‌) ಕೊನೆಯ ಹಂತದಲ್ಲಿ ದಿಟ್ಟ ಹೋರಾಟದಿಂದ ಮಧ್ಯಪ್ರದೇಶವು 1ನೇಇನಿಂಗ್ಸ್‌ನಲ್ಲಿ 431 ರನ್‌ಗೆ ಆಲೌಟಾಯಿತು. 5ರನ್‌ ಅಲ್ಪ ಮೊತ್ತದ ಮುನ್ನಡೆ ಪಡೆದುಕೊಂಡಿತು. ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ 1 ವಿಕೆಟ್‌ಗೆ 62 ರನ್‌ ಗಳಿಸಿದ್ದಾಗ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಮೊದಲ ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಮಧ್ಯಪ್ರದೇಶ 3 ಅಂಕ, ರಾಜ್ಯ ತಂಡ 1 ಅಂಕಕ್ಕೆ ಸಮಾಧಾನಪಟ್ಟಿತು.

ಮೊದಲ ಇನಿಂಗ್ಸ್‌ ಹಿನ್ನಡೆ ಅನುಭವಿಸಿರುವ ಕರ್ನಾಟಕದ ಕ್ವಾರ್ಟರ್‌ಫೈನಲ್‌ ಪ್ರವೇಶಕ್ಕೆ ಹಿನ್ನಡೆಯಾಗಿದೆ. ಫೆ.12ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಡಾ ವಿರುದ್ಧ ರಾಜ್ಯ ತಂಡ ಅಂತಿಮ ಲೀಗ್‌ ಪಂದ್ಯ ಆಡಲಿದೆ. ಈ ಪಂದ್ಯದ ಫ‌ಲಿತಾಂಶದ ಮೇಲೆ ರಾಜ್ಯ ತಂಡದ ಕ್ವಾರ್ಟರ್‌ ಫೈನಲ್‌ ಭವಿಷ್ಯ ನಿಂತಿದೆ. ಸದ್ಯ ರಾಜ್ಯ ತಂಡವು 7 ಪಂದ್ಯದಿಂದ 3 ಗೆಲುವು, 4 ಡ್ರಾದಿಂದ ಒಟ್ಟಾರೆ 25 ಅಂಕ ವನ್ನು ಪಡೆದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಗುಜರಾತ್‌, ಸೌರಾಷ್ಟ್ರ, ಆಂಧ್ರಪ್ರದೇಶ, ಬೆಂಗಾಲ್‌ ತಂಡಗಳು ಕ್ರಮವಾಗಿ ಮೊದಲ 4 ಸ್ಥಾನಗಳಲ್ಲಿವೆ.

ರಾಜ್ಯದ ಮುನ್ನಡೆ ತಪ್ಪಿಸಿದ ಆದಿತ್ಯ-ಕುಲದೀಪ್‌: ಕರ್ನಾಟಕ 1ನೇ ಇನಿಂಗ್ಸ್‌ 426 ರನ್‌ಗೆ ಉತ್ತರಿಸಿದ ಮಧ್ಯಪ್ರದೇಶ ಮೂರನೇ ದಿನದ ಆಟದ ಅಂತ್ಯಕ್ಕೆ 4 ವಿಕೆಟ್‌ಗೆ 311 ರನ್‌ ಗಳಿಸಿತು. ಆದಿತ್ಯ ಶ್ರೀವಾಸ್ತವ ಹಾಗೂ ವೆಂಕಟೇಶ್‌ ಐಯ್ಯರ್‌ ಶುಕ್ರವಾರ ಬ್ಯಾಟಿಂಗ್‌ ಮುಂದುವರಿಸಿದರು. ಆಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ರೋನಿತ್‌ ಮೋರೆ ಭದ್ರವಾಗಿ ನೆಲೆನಿಂತಿದ್ದ ವೆಂಕಟೇಶ್‌ ಐಯ್ಯರ್‌ (86 ರನ್‌) ವಿಕೆಟ್‌ ಉರುಳಿಸಿದರು.

ಅಲ್ಲಿಗೆ ಮಧ್ಯಪ್ರದೇಶ 323 ರನ್‌ಗೆ 5 ವಿಕೆಟ್‌
ಕಳೆದುಕೊಂಡಿತ್ತು. ಆನಂತರ ಬಂದ ಹಿಮಾಂಶು ಮಂತ್ರಿ (3 ರನ್‌), ಕುಮಾರ ಕಾರ್ತಿಕೇಯ (0), ರವಿ ಯಾದವ್‌ (0) ಹಾಗೂ ಗೌರವ್‌ ಯಾದವ್‌ (0)
ವಿಕೆಟ್‌ಗಳು ಪಟಪಟನೆ ಉದುರಿದವು. 381 ರನ್‌ಗೆ 9 ವಿಕೆಟ್‌ ಕಳೆದುಕೊಂಡು ಬಹುತೇಕ ಇನಿಂಗ್ಸ್‌ ಹಿನ್ನಡೆಯ ತುತ್ತ ತುದಿಗೆ ಬಂದು ಮಧ್ಯಪ್ರದೇಶ ತಲುಪಿತ್ತು. ಈ ಹಂತದಲ್ಲಿ 10ನೇ ವಿಕೆಟ್‌ಗೆ ಕುಲದೀಪ್‌ ಸೆನ್‌ ಜತೆಗೂಡಿದ ಆದಿತ್ಯ 50 ರನ್‌ ಜತೆಯಾಟ ನಿರ್ವಹಿಸಿದರು. ಇದರಿಂದಾಗಿ
ಮಧ್ಯಪ್ರದೇಶ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು.

Advertisement

ರಾಜ್ಯದ ಪರ ಅಭಿಮನ್ಯು ಮಿಥುನ್‌ (69ಕ್ಕೆ3), ರೋನಿತ್‌ ಮೋರೆ (93ಕ್ಕೆ2), ಕೆ.ಗೌತಮ್‌ (99ಕ್ಕೆ2), ಪ್ರತೀಕ್‌ ಜೈನ್‌ (49ಕ್ಕೆ1), ಶ್ರೇಯಸ್‌ ಗೋಪಾಲ್‌ (80ಕ್ಕೆ1) ವಿಕೆಟ್‌ ಕಬಳಿಸಿದರು.

ರಾಜ್ಯದ 2ನೇ ಇನಿಂಗ್ಸ್‌ ಉತ್ತರ: ಅದಾಗಲೇ ಡ್ರಾಗೊಳ್ಳುವುದು ಖಚಿತಗೊಂಡಿದ್ದರೂ ರಾಜ್ಯ ತಂಡ ದ್ವಿತೀಯ ಇನಿಂಗ್ಸ್‌ ಆರಂಭಿಸಿತು. ಆರ್‌.ಸಮರ್ಥ್ (12 ರನ್‌) ಗೌರವ್‌ ಯಾದವ್‌ ಎಸೆತದಲ್ಲಿ ಔಟಾದರು. ದೇವದತ್ತ ಪಡಿಕ್ಕಲ್‌ (ಅಜೇಯ 31 ರನ್‌) ಹಾಗೂ ರೋಹನ್‌ ಕದಮ್‌ (ಅಜೇಯ 16 ರನ್‌) ಮಾಡಿದ್ದಾಗ 4 ದಿನದ ಆಟಕ್ಕೆ ಸಂಪೂರ್ಣ ತೆರೆಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next