ಮಧ್ಯಪ್ರದೇಶ: ತಂದೆಯ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಏಳು ವರ್ಷದ ಬಾಲಕನ ಕತ್ತಿಗೆ ಗಾಳಿಪಟದ ದಾರ ಸಿಲುಕಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಧಾರ್ ನಗರದಲ್ಲಿ ಭಾನುವಾರ ಸಂಭವಿಸಿದೆ.
ನಗರದ ಹತ್ವಾರಾ ಚೌಕ್‌ನಲ್ಲಿ ವಿನೋದ್ ಚೌಹಾಣ್ ಎಂಬಾತ ತನ್ನ ಏಳು ವರ್ಷದ ಮಗನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚೌಹಾಣ್ ಅವರು ತನ್ನ ಮಗನನ್ನು ಬೈಕ್ ನಲ್ಲಿ ಎದುರು ಭಾಗದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ಗಾಳಿಪಟದ ದಾರ ಬಾಲಕನ ಕತ್ತು ಸೀಳಿದೆ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೋತ್ತಿಗಾಗಲೇ ಬಾಲಕ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ) ರವೀಂದ್ರ ವಾಸ್ಕೆಲ್ ಹೇಳಿದ್ದಾರೆ. ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟ ಹರಿಸುವುದು ಇಲ್ಲಿನ ವಾಡಿಕೆ ಹಾಗಾಗಿ ಗಾಳಿಪಟ ಹರಿಸಲಾಗಿತ್ತು ಆದರೆ ಗಾಳಿಪಟಕ್ಕೆ ಅಳವಡಿಸಿದ ದಾರ ಚೈನೀಸ್ ದಾರವಾಗಿದ್ದು ತುಂಬಾ ಗಟ್ಟಿಯಾಗಿರುತ್ತದೆ ಅಲ್ಲದೆ ಪಕ್ಕಕ್ಕೆ ತುಂಡರಿಸಲು ಸಾಧ್ಯವಿಲ್ಲ ಹಾಗಾಗಿ ಬಾಲಕನ ಕತ್ತು ಸೀಳಿಕೊಂಡು ಹೋಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Sirsi: ಅನಂತಕುಮಾರ್ ಹೇಳಿಕೆಯಿಂದ ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ: ದೊಡ್ಡೂರು ಟಾಂಗ್