Advertisement

ಮಧ್ವರಾಜ್‌ ಗೆಲುವು ಖಚಿತ ಕ್ಷೇತ್ರದ ಅಭಿವೃದ್ಧಿ ನಿಶ್ಚಿತ: ಸೊರಕೆ

02:28 AM Apr 15, 2019 | Team Udayavani |

ಉಡುಪಿ: ಈ ಚುನಾವಣೆ ದೇಶದ ಭವಿಷ್ಯವನ್ನು ತೀರ್ಮಾನಿಸಲಿದೆ. ದೇಶದಲ್ಲಿ ಭಾವನಾತ್ಮಕವಾಗಿ ಜನರನ್ನು ದಿಕ್ಕುತಪ್ಪಿಸುವ ಶಕ್ತಿಗಳನ್ನು ದೂರ ಇರಿಸಿ ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯುವವರಿಗೆ ಮತ ಚಲಾಯಿಸಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

Advertisement

ಅವರು ರವಿವಾರ ಹೆಜಮಾಡಿ ಪೇಟೆ ಮತ್ತು ಸುತ್ತಮುತ್ತ ಪಾದಯಾತ್ರೆ ಮೂಲಕ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜರ ಪರವಾಗಿ ಮತ ಯಾಚಿಸಿದರು.

ದೇಶದ ಐದು ಕೋಟಿ ಬಡ ಕುಟುಂಬಕ್ಕೆ ಮಾಸಿಕ ರೂ. 6,000 ನೀಡುವ ಮೂಲಕ ಕನಿಷ್ಠ ಆದಾಯ ಕಲ್ಪಸಲಾಗುವುದು. ಈ ಯೋಜನೆಯಡಿ ವಾರ್ಷಿಕ 72,000 ರೂ. ನೀಡಲಾಗುವುದು. ರೈತರಿಗೆ ಸಾಲ ಮನ್ನಾ, ಸಾಲ ಮುಕ್ತಿ ಯೋಜನೆ, ಪ್ರತ್ಯೇಕ ಬಜೆಟ್‌ ಮಂಡನೆ, ಒಂದೇ ಸ್ಲಾ$Âಬ್‌ನ ಅಡಿ ಜಿಎಸ್‌ಟಿಯನ್ನು ತಂದು ರೈತರಿಗೆ ಮತ್ತು ಬಡ ಮಧ್ಯಮ ಜನತೆ ಸಂತೃಪ್ತಿಯ ಜೀವನ ಸಾಗಿಸುವಂತೆ ಕಾಂಗ್ರೆಸ್‌ ಕ್ರಮ ಕೈಗೊಳ್ಳಲಿದೆ. ಯಾವುದೇ ಹೊಸ ಉದ್ಯಮಗಳಿಗೆ ಮೊದಲ 3 ವರ್ಷ ಅನುಮತಿ ಕಡ್ಡಾಯವನ್ನು ರದ್ದುಗೊಳಿಸಿ ಹೊಸ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುವುದು. 2020ರ ಒಳಗೆ ಖಾಲಿ ಇರುವ 22 ಲಕ್ಷ ಸರಕಾರಿ ಹುದ್ದೆಗಳ ಭರ್ತಿಯೊಂದಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರಮೋದ್‌ ಮಧ್ವರಾಜ್‌ ಗೆಲುವು ಖಚಿತ, ಲೋಕಸಭಾ ಕ್ಷೇತ್ರದ ಅಭಿವೃದ್ಧಿ ನಿಶ್ಚಿತ ಎಂದು ವಿನಯ ಕುಮಾರ್‌ ಸೊರಕೆ ಹೇಳಿದರು.

ನಿಮ್ಮ ಚಾಕರಿಯವನಾಗಲು ತೆನೆ ಹೊತ್ತ ಮಹಿಳೆಗೆ ಮತ ನೀಡಿ – ಪ್ರಮೋದ್‌
ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಐದು ವರ್ಷಗಳಿಂದ ಜನರ ಸಂಪರ್ಕಕ್ಕೆ ಸಿಗದೇ ಇದ್ದ ಸಂಸದರನ್ನು ನೀವು ಆಯ್ಕೆ ಮಾಡುವಿರೇ ಎಂಬ ಪ್ರಶ್ನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಾನು ಸಚಿವನಾಗಿದ್ದಾಗ ವಿಧಾನಸಭಾ ಕ್ಷೇತ್ರದ ಜನತೆಯ ಸಮಸ್ಯೆಗೆ ಸ್ಪಂದಿಸಿದ್ದೇನೆ. ವಿಶೇಷವಾಗಿ ದಿನದ 24 ಗಂಟೆಗಳ ಅವಧಿಯೂ ವಿದ್ಯುತ್‌ ಪೂರೈಕೆಯಾಗುವಂತೆ ಪ್ರಯತ್ನ ಮಾಡಿದ್ದೇನೆ. ಮೀನುಗಾರರ ಸಮಸ್ಯೆ, ಮರಳುಗಾರಿಕೆ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಅಲ್ಪಸಂಖ್ಯಾಕರ ಸಮಸ್ಯೆ ಅಲ್ಲದೆ ಪ್ರಮುಖ ಸಮಸ್ಯೆಗಳನ್ನು ಸಂಸತ್ತಿ
ನಲ್ಲಿ ನಿಮ್ಮ ಧ್ವನಿಯಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ವಿನಯ ಕುಮಾರ್‌ ಸೊರಕೆ ನಡೆಸಿದ್ದಾರೆ. ಇನ್ನು ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಅವರೊಂದಿಗೆ ಸೇರಿ ಕೋಟಿ- ಚೆನ್ನಯರಂತೆ ಮಾಡುತ್ತೇವೆ. ನನ್ನ ಚಿಹ್ನೆ ತೆನೆ ಹೊತ್ತ ಮಹಿಳೆಗೆ ಮತ ನೀಡಿ ಎಂದು ವಿನಂತಿಸಿ
ಕೊಂಡರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಂ.ಎ. ಗಫ‌ೂರ್‌, ರಾಜ್ಯ ಯುವ ಕಾಂಗ್ರೆಸ್‌ ಕಾರ್ಯದರ್ಶಿ ಅಬ್ದುಲ್‌ ಅಜೀಜ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಅಲೆವೂರು ಹರೀಶ್‌ ಕಿಣಿ, ಸರಸು ಡಿ. ಬಂಗೇರಾ, ನವೀನ್‌ಚಂದ್ರ ಸುವರ್ಣ, ವಿಶ್ವಾಸ್‌ ವಿ. ಅಮೀನ್‌, ಎಂ.ಪಿ. ಮೊಯಿದಿನಬ್ಬ, ಗಣೇಶ್‌ ಕೋಟ್ಯಾನ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next