Advertisement

ಶ್ರೀಕೃಷ್ಣ ಮಠದಲ್ಲಿ ಮಧ್ವನವಮಿ ಉತ್ಸವ

01:10 AM Feb 11, 2022 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮಧ್ವಾಚಾರ್ಯರು ಅಂತಿಮವಾಗಿ ಗೋಚರಿಸಿದ ದಿನ ಮಧ್ವನವಮಿ ಉತ್ಸವ ಗುರುವಾರ ನಡೆಯಿತು.

Advertisement

ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸ್ವರ್ಣ ರಥದಲ್ಲಿ ಶ್ರೀ ಮಧ್ವಾಚಾರ್ಯರ ಭಾವಚಿತ್ರ ಹಾಗೂ ಕೃತಿಗಳನ್ನಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಯಿತು.

ರಾಜಾಂಗಣದಲ್ಲಿ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಮೈಸೂರಿನ ವಿದ್ವಾನ್‌ ಬೆ.ನಾ. ವಿಜಯೀಂದ್ರ ಆಚಾರ್ಯಜರಿಂದ “ಭಾರತೀಯ ತಣ್ತೀಶಾಸ್ತ್ರಕ್ಕೆ ಆಚಾರ್ಯ ಮಧ್ವರ ಕೊಡುಗೆ’ ಕುರಿತು ಪ್ರವಚನ ನಡೆಯಿತು.

ಇದನ್ನೂ ಓದಿ:ಸ್ಯಾಮ್‌ಸಂಗ್‌ನ 3 ಫೋನ್‌ ಬಿಡುಗಡೆ; ಎಸ್‌22, ಎಸ್‌22+, ಎಸ್‌22 ಅಲ್ಟ್ರಾ

ಮಧ್ವನವಮಿಗೆ ಮೋದಿ ಟ್ವೀಟ್‌
ಮಧ್ವನವಮಿಯ ಶುಭವಸರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮೂಲಕ ಸಂದೇಶ ನೀಡಿದ್ದಾರೆ.

Advertisement

ಮಧ್ವನವಮಿಯ ಈ ಸಂದರ್ಭದಲ್ಲಿ ಮಧ್ವಾಚಾರ್ಯರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಆಚಾರ್ಯರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಆದರ್ಶ ಸಂದೇಶಗಳು ಪೀಳಿಗೆಗಳಿಗೆ ಸ್ಫೂರ್ತಿ ನೀಡಲಿ ಎಂದು ಹಾರೈಸಿ ಐದು ವರ್ಷಗಳ ಹಿಂದೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಐದನೆಯ ಪರ್ಯಾಯ ಕಾಲದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಮಧ್ವರ ಸಪ್ತಮ ಶತಮಾನೋತ್ಸವದಲ್ಲಿ ತಾನು ನೀಡಿದ ಭಾಷಣದ ತುಣುಕನ್ನು ಟ್ವೀಟರ್‌ ಮೂಲಕ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next