Advertisement

ಮಧ್ವರ ಪ್ರಜಾಪ್ರಭುತ್ವ ಪ್ರಯೋಗ: ಮೊಯ್ಲಿ ವಿಶ್ಲೇಷಣೆ

12:53 PM May 19, 2017 | Team Udayavani |

ಉಡುಪಿ: ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಪ್ರಜಾಪ್ರಭುತ್ವದ ಪ್ರಯೋಗ ಸಾಧ್ಯ ಎನ್ನುವುದನ್ನು ಉಡುಪಿ ಶ್ರೀಕೃಷ್ಣ ಮಠದ ಮೂಲಕ ಶ್ರೀ ಮಧ್ವಾಚಾರ್ಯರು ತೋರಿಸಿಕೊಟ್ಟಿರುವುದು ವಿಶೇಷ ಎಂದು ಮಾಜಿ ಮುಖ್ಯಮಂತ್ರಿ, ಸಾಹಿತಿ ಡಾ| ಎಂ. ವೀರಪ್ಪ ಮೊಯ್ಲಿ  ಹೇಳಿದರು.

Advertisement

ಶ್ರೀಕೃಷ್ಣ ಮಠದ ಸುತ್ತುಪೌಳಿ ನವೀಕರಣದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ಸಿದ್ಧಾಂತಗಳಲ್ಲಿ ಗೊಂದಲಗಳಿದ್ದಾಗ ಗೊಂದಲಗಳಿಲ್ಲದ, ನಿಖರವಾದ ನಿರ್ಣಯಗಳನ್ನು ಮಧ್ವರು ನೀಡಿದರು. ಉದಾಹರಣೆಗೆ ದುಶಾÏಸನ ಪ್ರಸಂಗ, ವಾಲಿ ವಧೆ, ಶಂಭೂಕ ವಧೆಯಲ್ಲಿ ಕೊಟ್ಟ ನಿರ್ಣಯಗಳು. ಇಲ್ಲಿ ಪಾರದರ್ಶಕತೆ ಎದ್ದು ಕಾಣು ತ್ತದೆ. ಇವರ ಕೃತಿಗಳನ್ನು ವಿಮಶಾìತ್ಮಕವಾಗಿ ನಾನು ಅವಲೋಕನ ಮಾಡಿದಾಗ ಇವರ ಜ್ಞಾನದ ಖನಿಯ ಉತVನನ ಇನ್ನಷ್ಟು ನಡೆಯಬೇಕಾಗಿದೆ ಎಂದೆನಿಸುತ್ತದೆ ಎಂದರು.

ಭಾರತ-ಈಜಿಪ್ಟ್: ಅಂದು ಇಂದು
ಈಜಿಪ್ಟ್ಗೆ ಹೋದಾಗ ಸುಮಾರು 3,000 ವರ್ಷಗಳ ಹಿಂದಿನ ಮಾನವ ಶರೀರ ಕೆಡದಂತೆ ಉಳಿದ ಪಿರಮಿಡ್‌ ತಂತ್ರಜ್ಞಾನವನ್ನು ನೋಡಿದೆ. ಆಗಿನ ಉಡುಗೆತೊಡುಗೆ, ಭಾಷೆ, ಆಹಾರ, ಜೀವನ ಶೈಲಿ ಈಗ ಇದೆಯೆ ಎಂದು ಕೇಳಿದರೆ ಬೇರೆ ನಾಗರಿಕರ ದಾಳಿಯಿಂದ ಎಲ್ಲವೂ ಹೋಗಿದೆ ಎಂದರು. ಮಹಾಭಾರತದಲ್ಲಿ ದ್ರೌಪದಿ ಪ್ರಕರಣದಲ್ಲಿ ಸೀರೆ ಎಂಬ ಶಬ್ದ ಸಿಗುತ್ತದೆ. ಈಗ ಮಹಿಳೆಯರು ಏನು ಉಡುತ್ತಿದ್ದಾರೆ? ರಾಮ ಲಂಕೆಗೆ ಹೋಗುವಾಗ ಶಿವಲಿಂಗಕ್ಕೆ ಪೂಜೆ ಮಾಡಿ ಹೋದ. ಈಗಲೂ ಶಿವಲಿಂಗ ಪೂಜೆ ನಡೆಯುತ್ತಿದೆ. ಸಂಸ್ಕೃತ ಭಾಷೆ ಇಂದಿಗೂ ಉಳಿದುಕೊಂಡಿದೆ. ಬೇರೆಲ್ಲಾ ದೇಶಗಳ ನಾಗರಿಕತೆಗಳು ನಾಶಗೊಂಡರೂ ಭಾರತದಲ್ಲಿ ಮಾತ್ರ ಪರಕೀಯರ ಆಕ್ರಮಣದ ನಡುವೆಯೂ ಸ್ಥಳೀಯ ಸಂಸ್ಕೃತಿ ಉಳಿದುಕೊಂಡು ಬಂದಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅಭಿಪ್ರಾಯಪಟ್ಟರು. 

ಶ್ರೀ ಪೇಜಾವರ ಮಠದ ಉಭಯ ಶ್ರೀಪಾದರು, ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪ್ರಯಾಗ ಮಠದ ಶ್ರೀಗಳು ಆಶೀರ್ವ ಚನ ನೀಡಿದರು. ಉಚ್ಚ ನ್ಯಾಯಾಲಯದ ನ್ಯಾಯಾ ಧೀಶ ನ್ಯಾ| ದಿನೇಶ ಕುಮಾರ್‌ ಶುಭ ಕೋರಿದರು. ವಿಧಾನ ಪರಿಷತ್‌ ಸದಸ್ಯರಾದ ಕ್ಯಾ| ಗಣೇಶ ಕಾರ್ಣಿಕ್‌, ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. ವಿದ್ವಾಂಸ ಡಾ| ಪ್ರಭಂಜನ ವ್ಯಾಸನಕೆರೆ ಉಪನ್ಯಾಸ ನೀಡಿದರು. ಬದರೀನಾಥಾಚಾರ್ಯ, ವಾಸುದೇವ ಭಟ್‌ ಪೆರಂಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು. 

ದ್ರೌಪದಿ ಕಾವ್ಯಕ್ಕೆ ಮಧ್ವರ ಪ್ರೇರಣೆ
ಮಧ್ವಾಚಾರ್ಯರು ಸ್ತ್ರೀಯರ ಕುರಿತು ವಿಶೇಷ ಗೌರವ ತಾಳಿದ್ದರು. ಅವರು ದ್ರೌಪದಿ ಕುರಿತು ನೀಡಿದ ನಿರ್ಣಯಗಳು ತನ್ನ “ಸಿರಿಮುಡಿ ಪರಿ ಕ್ರಮಣ’ (ದ್ರೌಪದಿ) ಕಾವ್ಯಕ್ಕೆ  ಪ್ರೇರಣೆಯಾಗಿವೆ. ಮುಂದೆ ನನ್ನ ಜೈನ ಧರ್ಮದ ಬಾಹುಬಲಿ ಕಾವ್ಯ ಡಿಸೆಂಬರ್‌, ಜನವರಿಯಲ್ಲಿ ಬಿಡುಗಡೆಗೊಳ್ಳಲಿದೆ. 

Advertisement

ಭಾವಪುಷ್ಪಗಳು-ಬ್ಯಾಲೆನ್ಸ್‌ ಶೀಟ್‌
ಕರ್ಮ ತೊರೆಯುವವನಿಗೆ ಜ್ಞಾನ ದೊರೆಯದು ಎಂದು ಸ್ಪಷ್ಟಪಡಿಸಿದ ಮಧ್ವರು ಜನಸೇವೆಗೆ ಆದ್ಯತೆ ನೀಡಿದರು. ಸತ್ಯ, ಅಹಿಂಸೆ, ಇಂದ್ರಿಯನಿಗ್ರಹ, ಸರ್ವಭೂತದಯೆ, ತಪಸ್ಸು, ಜ್ಞಾನ, ತ್ಯಾಗ ಇತ್ಯಾದಿ ಎಂಟು ಭಾವಪುಷ್ಪಗಳ ಮೂಲಕ ಪ್ರತಿ ಪರ್ಯಾಯದ ಅವಧಿಯಲ್ಲಿ ಮಾಡಿದ ಜನಸೇವೆ ಕುರಿತು ಮಠಾಧೀಶರು ಕೃಷ್ಣ-ಮಧ್ವರಿಗೆ ಬ್ಯಾಲೆನ್ಸ್‌ ಶೀಟ್‌ ಕೊಡಬೇಕು. ಇದರಲ್ಲಿ ಪೇಜಾವರ ಶ್ರೀಗಳು ಅಗ್ರಮಾನ್ಯರಾಗುತ್ತಾರೆ.
– ಡಾ| ಎಂ. ವೀರಪ್ಪ ಮೊಯ್ಲಿ 

Advertisement

Udayavani is now on Telegram. Click here to join our channel and stay updated with the latest news.

Next