Advertisement

18ರಿಂದ 5 ದಿನ ಮಧ್ವ-ಪುರಂದರ ನಮನ

07:25 AM Feb 12, 2019 | |

ಮೈಸೂರು: ನಗರದ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯಿಂದ ಫೆ.18ರಿಂದ 22ರವರೆಗೆ ‘ಮಧ್ವ ಪುರಂದರ ನಮನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಈ ಕಾರ್ಯಕ್ರಮದಲ್ಲಿ ವಿಮರ್ಶೆ, ಗಾಯನ, ಪ್ರವಚನ, ಸಂವಾದ ಹಾಗೂ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.

Advertisement

ಫೆ.18ರಂದು ಸಂಜೆ 6ಕ್ಕೆ ಉಡುಪಿಯ ಅದಮಾರು ಮಠದ ಭಾವಿ ಪರ್ಯಾಯ ಪೀಠಾಧಿಪತಿ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭೀಮಸೇತು ಮುನಿವೃಂದ ಮಠದ ಭೀಮನಕಟ್ಟೆ ಪೀಠಾಧಿಪತಿ ರಘುವರೇಂದ್ರತೀರ್ಥ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯವಹಿಸುವರು.

ಅಂದು ಸಂಜೆ 6 ರಿಂದ ರಾತ್ರಿ 8.30ರವರೆಗೆ ‘ಮಧ್ವವೈಭವ’ ಹನುಮ ಭೀಮ ಮಧ್ವ ಮುನಿಯ ಕುರಿತು ವಿದ್ವಾನ್‌ ಬೆ.ನಾ.ವಿಜಯೀಂದ್ರಾಚಾರ್ಯರಿಂದ ವಿಶ್ಲೇಷಣೆ ಹಾಗೂ ಬಾಗಲಕೋಟೆಯ ವಿದ್ವಾನ್‌ ಜಯತೀರ್ಥ ನಾರಾಯಣ ತಾಸಗಾಂವ್‌ರವರಿಂದ ಸಂಗೀತ ಕಾರ್ಯಕ್ರಮವಿದೆ.

ಕನಕ ವೈಭವ: ಫೆ.20ರಂದು ಸಂಜೆ 6ರಿಂದ 8.30ರವರೆಗೆ ‘ಕನಕ ವೈಭವ’ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂಬುದರ ಕುರಿತು ಬೆಂಗಳೂರಿನ ವಿದ್ವಾನ್‌ ಬ್ರಹ್ಮಣ್ಯಾಚಾರ್ಯರವರಿಂದ ವಿಶ್ಲೇಷಣೆ ಹಾಗೂ ಬೆಂಗಳೂರಿನ ಕು.ಭೂಮಿಕಾ ಮಧುಸೂದನ್‌ರಿಂದ ಗಾಯನವಿದೆ.

ಜಯ ವೈಭವ: ಫೆ.21ರಂದು ಸಂಜೆ 6ರಿಂದ 8.30ರವರೆಗೆ ‘ಜಯ ವೈಭವ’ ನಿನ್ನ ಒಲುಮೆಯಿಂದ ಎಂಬುದರ ಕುರಿತು ಬೆಂಗಳೂರಿನ ವಿದ್ವಾನ್‌ ಕೃಷ್ಣರಾಜ್‌ ಕಮಿತ್‌ಪಾಡಿಯವರಿಂದ ವಿಶ್ಲೇಷಣೆ ಹಾಗೂ ಯುವ ಗಾಯಕ ಆಶೀಶ್‌ ನಾಯಕ್‌ ಮತ್ತು ಕು.ಸುಸ್ಮಿತರಿಂದ ಗಾಯನವಿದೆ.

Advertisement

ದಾಸದ್ವಯ ವೈಭವ: ಫೆ.22ರಂದು ಸಂಜೆ 6ರಿಂದ 8.30ರವರೆಗೆ ‘ದಾಸದ್ವಯ ವೈಭವ’ ಗೋಪಾಲ ದಾಸರು ಹಾಗೂ ಜಗನ್ನಾಥ್‌ ದಾಸರ ಕುರಿತು ಗುಳೇದಗುಡ್ಡದ ವಿದ್ವಾನ್‌ ವೆಂಕಟನರಸಿಂಹಾಚಾರ್ಯ, ಧಾರವಾಡರವರಿಂದ ವಿಶ್ಲೇಷಣೆ ಹಾಗೂ ಪುಣೆಯ ವಿದುಷಿ ನಂದಿನಿರಾವ್‌ರಿಂದ ಗಾಯನವಿದೆ.

ದಾಸ ಕುಸುಮಾಂಜಲಿ: ಪ್ರತಿದಿನ ಸಂಜೆ 4.30ರಿಂದ 6 ಗಂಟೆವರೆಗೆ ಶುಭಾ ರಾಘವೇಂದ್ರ ಮತ್ತು ಸುಮನಾ ಶ್ರೀಕಾಂತ್‌ರವರ ಸಾರಥ್ಯದಲ್ಲಿ ಮೈಸೂರಿನ ಪ್ರತಿಭಾವಂತ ಗಾಯಕರಿಂದ ದಾಸ ಕುಸುಮಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲಾ ದಿನಗಳ ಸಂಗೀತ ಕಛೇರಿಗೆ ಪಕ್ಕವಾದ್ಯದ ಸಹಕಾರವನ್ನು ವಿದ್ವಾನ್‌ ಗಣೇಶ್‌ ಭಟ್ ಹಾಗೂ ವೃಂದದವರು ನೀಡಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಡಾ.ಜಿ.ರವಿ ಹಾಗೂ ಕಾರ್ಯದರ್ಶಿ ಎಸ್‌.ರವಿಕುಮಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next