Advertisement

ಪ್ರತಿ ಮಾಸ ಹರಿಯುತ್ತಿದೆ “ಮಧುರ ಧ್ವನಿ’

06:49 PM Jul 18, 2019 | mahesh |

“ಮಧುರಧ್ವನಿ ಉಡುಪಿ’ ಮಂಗಳೂರು ಘಟಕ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು ಇದರ ಆಶ್ರಯದಲ್ಲಿ “ಸುಪ್ರಭಾತ’ ಸಂಗೀತ ಸೇವಾ ಕಾರ್ಯಕ್ರಮವನ್ನು ಪ್ರತಿ ತಿಂಗಳು ನಡೆಸಲಾಗುತ್ತಿದೆ. ಜನವರಿಯಿಂದ ಪ್ರಾರಂಭವಾದ ಈ ಕಾರ್ಯಕ್ರಮವು ಈ ತನಕ ಒಟ್ಟು ಆರು ಸಂಗೀತ ಕಾರ್ಯಕ್ರಮಗಳನ್ನು ಮುಗಿಸಿದೆ. ಕರ್ನಾಟಕ ಶಾಸ್ತ್ರೀಯ ಹಾಗೂ ವಾದ್ಯ ಸಂಗೀತ ಕಲಿಕೆಯ ಯುವ-ಅಭ್ಯಾಸಿಗಳಿಗೆ ದೇವಸ್ಥಾನದಲ್ಲಿ ಇದ್ದ ವ್ಯವಸ್ಥೆಯ ಚೌಕಟ್ಟಿನೊಳಗೆ ಸರಳವಾಗಿ ಸಂಗೀತ ಸೇವಾರೂಪದಲ್ಲಿ ಪ್ರತಿಭೆ ಅನಾವರಣಕ್ಕೆ ಅನುವು ಮಾಡಿಕೊಡುವುದು ಪ್ರಮುಖ ಉದ್ದೇಶ.

Advertisement

ಮೊದಲ ಕಾರ್ಯಕ್ರಮವನ್ನು “ಮಧುರ ಧ್ವನಿ’ಯ ಕತೃ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರು ಪಿಟೀಲಿನಲ್ಲಿ ಶ್ರೀಧರ್‌ ಆಚಾರ್‌ ಹಾಗೂ ಮೃದಂಗದಲ್ಲಿ ಮನೋಹರ್‌ ರಾವ್‌ ಅವರ ಸಹಕಾರದೊಂದಿಗೆ ನಡೆಸಿಕೊಟ್ಟರು. ಅನಂತರದ ಕಾರ್ಯಕ್ರಮಗಳನ್ನು ಸಂಗೀತಾಭ್ಯಾಸಿಗಳಾದ ಉಷಾ ಕಾರಂತ್‌, ಆರಾಧನಾ ಮರಾಠೆ, ಪ್ರಭಾತ್‌ ಎಂ. ಗೋಖಲೆ, ಶರತ್‌ ಕುಮಾರ್‌ ಹಾಗೂ ವಂದನಾರಾಣಿ ನಡೆಸಿಕೊಟ್ಟರು. ಪಕ್ಕವಾದ್ಯದಲ್ಲಿ ಪ್ರಸನ್ನಕುಮಾರ್‌ ಹೊಸಬೆಟ್ಟು , ವೇಣುಗೋಪಾಲ್‌ ಶ್ಯಾನುಬೋಗ್‌, ಧನಶ್ರೀ ಶಬರಾಯ, ವಿಶ್ವಾಸ್‌ ಕೃಷ್ಣ ಹಾಗೂ ಹರಿಕೃಷ್ಣ ಪಾವಂಜೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next