Advertisement

ಮಧುಪಾನಕ್ಕೆ ಸ್ನೇಹಿತರ ಹೊಸಪಾಠ

01:07 PM Jan 09, 2023 | Team Udayavani |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಮಧುಪಾನದ ಹೊಸಪಾಠ’ ಎಂಬ ಮ್ಯೂಸಿಕ್‌ ವಿಡಿಯೋ ಆಲ್ಬಂ ಹೊಸವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ.

Advertisement

ಇನ್ನು ಹೊಸವರ್ಷದಲ್ಲಿ ಪಾರ್ಟಿ ಮೂಡ್‌ ತರುವಂತಹ “ಮಧುಪಾನದ ಹೊಸಪಾಠ’ ಪಾರ್ಟಿಸಾಂಗ್‌ಗೆ ಆರವ್‌ ರಿಶಿಕ್‌ ಸಂಗೀತ ಸಂಯೋಜಿಸಿದ್ದು, ಕಂಗ್ಲೀಷ್‌ ಡ್ಯಾಡಿ ಚಿಕ್ಕು (ಚಿಕ್ಕ ವೆಂಕಟ ರಾಮು) ಸಾಹಿತ್ಯ ಬರೆದು ಜೊತೆಗೆ ತೆರೆಮೇಲೆ ಅಭಿನಯಿಸಿದ್ದಾರೆ.

ತಮ್ಮ ಹೊಸ ಪ್ರಯತ್ನದ ಬಗ್ಗೆ ಮಾತನಾಡುವ ಚಿಕ್ಕು, “ಎಷ್ಟೋ ಜನ ರ್ಯಾಪರ್‌ಗಳ ಸ್ಫೂರ್ತಿಯಿಂದ ನಾನೂ ರ್ಯಾಪರ್‌ ಆಗಬೇಕೆಂಬ ಕನಸು ಹುಟ್ಟಿಕೊಂಡಿತು. ಹಲವು ವರ್ಷಗಳ ಕನಸು “ಮಧುಪಾನದ ಹೊಸಪಾಠ’ ಮ್ಯೂಸಿಕ್‌ ಆಲ್ಬಂ ಮೂಲಕ ನನಸಾಗುತ್ತಿದೆ. ಸ್ನೇಹಿತರ ಸಹಕಾರದಿಂದ ಈ ಮ್ಯೂಸಿಕ್‌ ವಿಡಿಯೋ ಆಲ್ಬಂ ಬಿಡುಗಡೆ ಮಾಡಿದ್ದೇವೆ’ ಎಂದರು.

ಇನ್ನು ಈ ಮ್ಯೂಸಿಕ್‌ ಆಲ್ಬಂ ಬಗ್ಗೆ ಮಾತನಾಡುವ ನಟ ಕಂ ನಿರ್ಮಾಪಕ ದಕ್ಷಿಣಮೂರ್ತಿ, “ನನಗೆ ಮೊದಲಿನಿಂದಲೂ ಕಲಾವಿದನಾಗಬೇಕೆಂಬ ಕನಸಿತ್ತು. ಆದರೆ ಆ ಕನಸು ಈಡೇರಿರಲಿಲ್ಲ. ಈ ಮ್ಯೂಸಿಕ್‌ ಆಲ್ಬಂ ಮೂಲಕ ನಟನಾಗುವ ಕನಸು ಈಡೇರಿತು. ಸ್ನೇಹಿತ ಚಿಕ್ಕು ಈ ಮ್ಯೂಸಿಕ್‌ ಆಲ್ಬಂ ಬಗ್ಗೆ ಹೇಳಿದ ನಂತರ ಇಷ್ಟವಾಗಿ ನಿರ್ಮಾಣ ಮಾಡಿದ್ದೆ. ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಈ ಮ್ಯೂಸಿಕ್‌ ಆಲ್ಬಂ ನಿರ್ಮಿಸಿದ್ದೇವೆ’ ಎಂದು ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next