Advertisement

Madhugiri: ಪೊಲೀಸ್ ಪೇದೆ ಕಾಣೆ: ಹುಡುಕಾಟದಲ್ಲಿ ಸಿಪಿಐ

12:10 PM Dec 08, 2023 | Team Udayavani |

ಮಧುಗಿರಿ: ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ವೀರೇಶ್ ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ.

Advertisement

ಮಧುಗಿರಿ-ಪಾವಗಡ ಕೆ – ಶಿಪ್ ರಾಜ್ಯ ಹೆದ್ದಾರಿ ಮಿಡಿಗೇಶಿ ಹೋಬಳಿ ಬಿದರೆ ಕೆರೆ ಬಳಿ ಪೊಲೀಸ್ ಪೇದೆ ವೀರೇಶ್ ದ್ವಿಚಕ್ರವಾಹನ ಹಾಗೂ ಬಟ್ಟೆ, ಮೊಬೈಲ್ ಪತ್ತೆಯಾಗಿದೆ.

ಪ್ರತಿನಿತ್ಯ ವಾಯುವಿಹಾರ ಮಾಡುತಿದ್ದ ವೀರೇಶ್ ಅವರ ಬಟ್ಟೆ, ದ್ವಿಚಕ್ರ ವಾಹನ ಕೆರೆ ಏರಿ ಬಳಿ ಪತ್ತೆಯಾದ ಹಿನ್ನೆಲೆ ಕೆರೆ ಏರಿ ಬಳಿ ರಾತ್ರಿ 11 ಗಂಟೆ ವರೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

ಕೊಪ್ಪಳ ಜಿಲ್ಲೆಯ ನಿವಾಸಿಯಾಗಿರುವ ವೀರೇಶ್ ಗೆ ಇದೇ ತಿಂಗಳು 21 ರಂದು ಮದುವೆ ನಿಶ್ಟಯವಾಗಿತ್ತು. ಈ ಹಿನ್ನೆಲೆ ಆತ ರಜೆ ನೀಡಲು ಅನುಮತಿ ಕೋರಿದ್ದರು ಎನ್ನಲಾಗಿದೆ. ವೀರೇಶ್ ನಿನ್ನೆ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸಿಪಿಐ ಹನುಮಂತರಾಯಪ್ಪ ಪ್ರತಿಕ್ರಿಯೆ ನೀಡಿದ್ದು, ವೀರೇಶ್ ದೂರವಾಣಿ ಕರೆ ಸ್ವೀಕರಿಸಿಲ್ಲ. ನಿನ್ನೆ ಕರ್ತವ್ಯಕ್ಕೂ ಹಾಜರಾಗಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪೇದೆಯ ಕಣ್ಮರೆಯು ಸದ್ಯ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next