Advertisement

ಪಟ್ಟಣದ ಅಭಿವೃದ್ಧಿಗೆ 145 ಕೋಟಿ ಅನುದಾನ; ಶಾಸಕ ಎಂ.ವಿ ವೀರಭದ್ರಯ್ಯ

07:34 PM Jan 18, 2023 | Team Udayavani |

ಮಧುಗಿರಿ; ಮಧುಗಿರಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ 4.5 ವರ್ಷದಲ್ಲಿ ಸುಮಾರು 145 ಕೋಟಿ ಅನುದಾನ ತರಲಾಗಿದೆ ಎಂದು ಶಾಸಕ ಎಂವಿ ವೀರಭದ್ರಯ್ಯ ತಿಳಿಸಿದರು.

Advertisement

ಪಟ್ಟಣದಲ್ಲಿ ಮುಖ್ಯಮಂತ್ರಿ ನಗರೊತ್ತಾನ ಅನುದಾನದಡಿ ಆರು ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಬಾರಿ ಬಿದ್ದ ಭಾರಿ ಮಳೆಯಿಂದ ಪಟ್ಟಣದ ರಸ್ತೆಗಳಲ್ಲೂ ಗುಂಡಿಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿತ್ತು. ಇದು ಹೊಸ ರಸ್ತೆಗಳ ನಿರ್ಮಾಣಕ್ಕೆ ತೊಡಕಾಗಿತ್ತು. ಅನುದಾನದ ಮೇಲೆ ತಾಂತ್ರಿಕ ತೊಂದರೆಯಿದ್ದು ಸರ್ಕಾರದ ಮೇಲೆ ಒತ್ತಡ ತಂದು ಇಂದು ಈ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಆದರೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ರಸ್ತೆಗಳ ಸಮಸ್ಯೆಯನ್ನ ಸಹಿಸಿಕೊಂಡ ಜನತೆಯಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇನ್ನು 1.5 ತಿಂಗಳಲ್ಲಿ ಪಟ್ಟದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ. ಉಳಿದಂತೆ ಪಟ್ಟಣದ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ಸಹಕಾರ ನೀಡುವಂತೆ ಜನತೆ ಹಾಗೂ ಪುರಸಭಾ ಸದಸ್ಯರಲ್ಲಿ ಮನವಿ ಮಾಡಿದ ಶಾಸಕರು ಒಟ್ಟಾಗಿ ಜನರ ಜನರ ಅಭಿವೃದ್ಧಿ ಮಾಡೋಣ ಎಂದರು.

ಪುರಸಭಾ ಸದಸ್ಯ ಎಂ ಆರ್ ಜಗನ್ನಾಥ್ ಮಾತನಾಡಿ ವಿರೋಧ ಪಕ್ಷದವರು ಹಾಗೂ ಸಾರ್ವಜನಿಕರಲ್ಲಿ ಪಟ್ಟಣದ ರಸ್ತೆಗಳ ಬಗ್ಗೆ ಹಾಗೂ ಶಾಸಕರ ಬಗ್ಗೆ ವಿರೋಧಿಸಿದ್ದ ವಿಪಕ್ಷದ ನಾಯಕರು ಇಂದು ಒಪ್ಪುವಂತಹ ಕೆಲಸ ಶಾಸಕರು ಮಾಡುತ್ತಿದ್ದಾರೆ. ಸರ್ಕಾರದಿಂದ ಅನುದಾನ ತರಲು ಕೆಲವು ಸಮಸ್ಯೆಗಳು ಎದುರಾಗಿದ್ದವು. ಎಲ್ಲವನ್ನು ನಿವಾರಿಸಿಕೊಂಡು ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ಕೊನೆಗೂ ಹಣ ತಂದ ಶಾಸಕರಿಗೆ ಶಾಸಕರಿಗೆ ಸಾರ್ವಜನಿಕರ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.

ಮಾಜಿ ಶಾಸಕರಿಗೆ ಪಂತಾಹ್ವಾನ ನೀಡಿದ ಗಂಗರಾಜು
ಪುರಸಭಾ ಸದಸ್ಯ ಎಂಎಲ್ ಗಂಗರಾಜು ಮಾತನಾಡಿ ಹಿಂದೆ ಯಾರೂ ತರೆದಷ್ಟು ಅನುದಾನವನ್ನ ಶಾಸಕರು ಕ್ಷೇತ್ರಕ್ಕೆ ತಂದಿದ್ದು ವಿರೋಧಿಗಳ ಬಾಯಿ ಬಂದಾಗಿದೆ. ಆದರೂ ಕೆಲವರು ವೃತ ಆರೋಪ ಮಾಡುತ್ತಿದ್ದು, ಹಾಲಿ ಹಾಗೂ ಮಾಜಿ ಶಾಸಕರು ಒಂದೆಡೆ ಕುಳಿತು ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ನಡೆಸಿದರೆ ವೀರಭದ್ರಯ್ಯ ನವರು ತಂದ ಅನುದಾನ ಹಾಗೂ ರಚನಾತ್ಮಕವಾದ ಅಭಿವೃದ್ಧಿ ಕಾಮಗಾರಿಗೆ ಸಾಟಿಯಿರಲ್ಲ. ಕಳೆದ ಅವಧಿಗಿಂತ ಈ ಅವಧಿಯಲ್ಲಿ ಹೆಚ್ಚು ಅನುದಾನ ಕ್ಷೇತ್ರಕ್ಕೆ ಬಂದಿರುವುದು ಸತ್ಯವಾಗಿದ್ದು ಅದನ್ನು ಜನರ ಮುಂದೆ ಇಡಬೇಕು ಎಂದರು.

ಪುರಸಭಾ ಅಧ್ಯಕ್ಷ ತಿಮ್ಮರಾಜು ಮಾತನಾಡಿ ಈ ಕಾಮಗಾರಿಗಾಗಿ ಶಾಸಕರು ಬಹಳ ಕಷ್ಟಪಟ್ಟಿದ್ದಾರೆ ಸರ್ಕಾರವಿಲ್ಲದಿದ್ದರೂ ಅಧಿಕಾರಿ ಸ್ನೇಹಿತರೆ ಜೊತೆ ಸಮನ್ವಯ ಸಾಧಿಸಿ 10 ಕೋಟಿ ರೂಗಳ ಅನುದಾನವನ್ನು ತಂದಿರುವ ಶಾಸಕರಿಗೆ ಅಭಿನಂದನೆಗಳು ಎಂದರು.

Advertisement

ಇದನ್ನೂ ಓದಿ: ಮುಸ್ಲಿಂ ಬಂಧುಗಳನ್ನು ಜೊತೆಗೆ ಕೊಂಡೊಯ್ಯಲು ಪ್ರಧಾನಿ ಸಲಹೆ : ಯಡಿಯೂರಪ್ಪ

Advertisement

Udayavani is now on Telegram. Click here to join our channel and stay updated with the latest news.

Next