ಮಧುಗಿರಿ: ತಾಲೂಕಿನ ಮಿಡಿಗೇಶಿ ಹೋಬಳಿಯ ಮಲ್ಲನಾಯಕನಹಳ್ಳಿ ಗ್ರಾಮದ ದಂಪತಿ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ
ಮಲ್ಲನಾಯಕನಹಳ್ಳಿ ಗ್ರಾಮದ ವಾಸಿಗಳಾದ ಬಂಡಿ ನರಸಿಂಹಯ್ಯ (65) ಹಾಗೂ ಹನುಮಕ್ಕ (55) ಎನ್ನಲಾದ ಇವರು ಕ್ರಿಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ದಂಪತಿಗಳು.
ಇಂದು ಬೆಳಿಗ್ಗೆ ಕೆಲಸಕ್ಕೆ ಎಂದು ಹೋದವರು ಸತ್ತಿಗೆನಹಳ್ಳಿ ಸಮೀಪದ ಜಮೀನೊಂದರಲ್ಲಿ ಸಾಂಸಾರಿಕ ಜೀವನದ ಸಣ್ಣ ಜಗಳಕ್ಕೆ ಬೇಸತ್ತು ವಿಷ ಕುಡಿದಿದ್ದಾರೆಂದು ತಿಳಿದು ಬಂದಿದೆ.
ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ
ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಶಿಕ್ಷಕರ ದಿನಾಚರಣೆ : ಒಕ್ಕಲಿಗ ಸಂಘದ ಅಂತರಿಕ ಕಲಹ ಸ್ಪೋಟ