Advertisement

Kannappa ಸೇರಿದ ಮಧುಬಾಲ; ಫಸ್ಟ್‌ ಲುಕ್‌ ರಿಲೀಸ್

12:06 PM Aug 04, 2024 | Team Udayavani |

ಪ್ಯಾನ್‌ ಇಂಡಿಯಾ ಚಿತ್ರ “ಕಣ್ಣಪ್ಪ’ ತಂಡಕ್ಕೆ ಕಲಾವಿದರು ಸೇರ್ಪಡೆಯಾಗುತ್ತಲೇ ಇದ್ದಾರೆ. ವಿಷ್ಣು ಮಂಚು ಕಣ್ಣಪ್ಪನಾಗಿ ತಮ್ಮ ಖದರ್‌ ತೋರಿಸಲಿದ್ದು, ನಟಿ ಮಧುಬಾಲ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಲುಕ್‌ ಅನಾವರಣ ಮಾಡಲಾಗಿದೆ.

Advertisement

ಕಣ್ಣಪ್ಪ ಚಿತ್ರದಲ್ಲಿ ಪನ್ನಗ ಹೆಸರಿನ ಖಡಕ್‌ ಪಾತ್ರದಲ್ಲಿ ಮಧುಬಾಲ ಕಾಣಿಸಿಕೊಳ್ಳುತ್ತಿದ್ದಾರೆ. ಕೈಯಲ್ಲಿ ಕತ್ತಿಹಿಡಿದು ಶತ್ರುಗಳ ಸಂಹಾರಕ್ಕೆ ನಿಂತಿರುವ ಅವರ ಗೆಟಪ್‌ ಬಿಡುಗಡೆ ಮಾಡಿದೆ ತಂಡ. ಬೇಡ ಕುಲದ ನಾಯಕಿಯಾಗಿ ಮಧು ಅವರ ಪಾತ್ರ ಕಣ್ಣಪ್ಪ ಚಿತ್ರದಲ್ಲಿ ಸಾಗಲಿದೆ.

ತಮ್ಮ ಸಮುದಾಯದ ನಾಯಕಿ ಮಾತ್ರವಲ್ಲ, ಹೋರಾಟದಲ್ಲಿಯೂ ದಿಟ್ಟೆ, ಧೀರೆ. ಅಂದುಕೊಂಡಂತೆ ಮಧುಬಾಲ ಅವರ ಪಾತ್ರ ಮೂಡಿಬಂದಿದ್ದು, ನೋಡುಗರಿಗೆ ಇಷ್ಟವಾಗಲಿದೆ ಎಂಬುದು ಚಿತ್ರತಂಡ ಭರವಸೆಯ ಮಾತುಗಳು.

ಚಿತ್ರದಲ್ಲಿ ಮೋಹನ್‌ ಬಾಬು, ಪ್ರಭಾಸ್‌, ಅಕ್ಷಯ್‌ ಕುಮಾರ್‌, ಮೋಹನ್‌ ಲಾಲ್, ಶರತ್‌ ಕುಮಾರ್‌, ಮಧುಬಾಲ, ಕಾಜಲ್‌ ಅಗರ್ವಾಲ್‌ ಸೇರಿ ಬಹು ತಾರಾಗಣವೇ ಇದೆ.

ಮಗನ ಚಿತ್ರವನ್ನು ಸ್ವತಃ ತಂದೆ ಮೋಹನ್‌ ಬಾಬು ನಿರ್ಮಿಸುತ್ತಿದ್ದು, ಈ ಚಿತ್ರವನ್ನು ಮುಖೇಶ್‌ ಕುಮಾರ್‌ ಸಿಂಗ್‌ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಿಗೂ ಈ ಚಿತ್ರ ಡಬ್‌ ಆಗಿ ರಿಲೀಸ್‌ ಆಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next