Advertisement

Kannada Movie; ಟೀಸರ್‌ ನಲ್ಲಿ ಅಸುರರು

06:18 PM Sep 13, 2024 | Team Udayavani |

ದರೋಡೆ ಕುರಿತ ಕಥೆಯನ್ನೊಳಗೊಂಡ “ಅಸುರರು’ ಸಿನಿಮಾದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ರಾಜ್‌ ಬಹದ್ದೂರ್‌ ಈ ಸಿನಿಮಾದ ನಿರ್ದೇಶಕರು.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರಾಜ್‌ ಬಹದ್ದೂರ್‌, “ತಾತ ಹೇಳುತ್ತಿದ್ದ ಕಥೆ ಇದು. ಚಿಕ್ಕಂದಿನಿಂದ್ದಾಗ ಕಥೆ ಕೇಳಿ ರೋಮಾಂಚನವಾಗುತ್ತಿತ್ತು. ಅಂದು ನನಗೆ ತಲೆಯಲ್ಲಿತ್ತು. ಹಿಂದೆ ನಮಗೆ ಗೊತ್ತಿಲ್ಲದ ವಿಷಯ ತುಂಬಾ ನಡೆದಿದೆ. ಅಂತಹ ವಿಷಯವನ್ನು ಜನರಿಗೆ ಪರಿಚಯಸಬೇಕು ಎಂದಾಗ ಅಸುರರು ಸಿನಿಮಾ ಮಾಡಿದ್ದು. ಅಸುರರು ಅಂದರೆ ರಾಕ್ಷಸರರು. ಇವರು ಬೇರೆ. ಇವರು ಊರಿನ ಜನಗಳ ಮಧ್ಯೆ ಇರುತ್ತಿರಲಿಲ್ಲ. ಇವರ ಕೆಲಸ ಕಳ್ಳತನ ದರೋಡೆ ಮಾಡುವುದು’ ಎಂದು ಹೇಳಿದರು.

ನಾಯಕ ತಮ್ಮಣ್ಣ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. ಚಿತ್ರವನ್ನು ನವೆಂಬರ್‌ನಲ್ಲಿ ತೆರೆಗೆ ತರುವುದಾಗಿ ಹೇಳಿದರು. ಅಸುರರು ಚಿತ್ರಕ್ಕೆ ರಾಜ್‌ ಬಹದ್ದೂರ್‌ ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಉಳಿದಂತೆ ರಾಹುಲ್‌ ಗಾಯಕವಾಡ, ತಮ್ಮಣ್ಣ ಟಿ.ಕೆ., ತಿಪ್ಪಣ್ಣ ಟಿ.ಎಸ್‌, ಮಲ್ಲಿಕಾರ್ಜುನ್‌ ಮಿಮಿಕ್ರಿ, ಸುಪ್ರಿತಾ ರಾಜ್‌ ತಾರಾಬಳಗದಲ್ಲಿದ್ದಾರೆ.

ರಾಜ್‌ ಬಹದ್ದೂರ್‌ ಫಿಲಂ ಫ್ಯಾಕ್ಟರಿ ಬ್ಯಾನರ್‌ನಡಿ ನಿರ್ಮಾಣವಾಗಿರುವ ಅಸುರರು ಸಿನಿಮಾಗೆ ಸುರೇಶ್‌ ಅರಸ್‌ ಸಂಕಲನ, ಸುಭಾಷ್‌ ಸಂಗೀತ, ನವೀನ್‌ ಸೂರ್ಯ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.