ಯಾದಗಿರಿ: ಸಿಎಂ ಸಿದ್ದರಾಮಯ್ಯನವರ ಜೊತೆಗೆ ಕರ್ನಾಟಕ ಜನರಿದ್ದಾರೆ, ಅವರು ನೀಡಿದ ಗ್ಯಾರಂಟಿ ಯೋಜನೆಗಳು ಅವರನ್ನು ಕಾಪಾಡುತ್ತದೆ. ಬಿಜೆಪಿಯವರು ನಡೆಸುತ್ತಿರುವ ರಾಜಕೀಯ ಆಡ ನಡೆಯುವುದಿಲ್ಲ, ಸ್ವತಃ ಆರೋಪ ಮಾಡುವ ಬಿಜೆಪಿಯವರೇ ಬೇಲ್ ಮೇಲೆ ಹೊರಗಡೆ ಇದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಆದೇಶ ವಿಚಾರವಾಗಿ ಬಿಜೆಪಿ ಅವರು ರಾಜಿನಾಮೆ ಕೇಳುತ್ತಿರುವುದು ಸರಿಯಾದ ನಡೆಯಲ್ಲ, ಸಿಎಂ ಸಿದ್ದರಾಮಯ್ಯನವರು ನಿರಪರಾಧಿಯಾಗಿ ಹೊರಗಡೆ ಬಂದೆ ಬರುತ್ತಾರೆ, ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ ಎಂದು ಹೇಳಿದರು.
ಇಷ್ಟೆಲ್ಲಾ ಮಾತಾಡುವ ಬಿಜೆಪಿ ನಾಯಕರೇ ಬೇಲ್ ಮೇಲೆ ಆಚೆ ಇದ್ದಾರೆ, ಪಾದಯಾತ್ರೆ ಮಾಡಿದ ಬಿಜೆಪಿಗರು ಎಷ್ಟು ನಿಯತ್ತಾಗಿ ಇದ್ದಾರೆ, ಎಷ್ಡು ಜನ ಜೈಲಿಗೆ ಹೋಗಿ ಬಂದಿದ್ದಾರೆ ಎನ್ನುವ ಲೆಕ್ಕ ನಮ್ಮ ಹತ್ತಿರ ಇದೆ, ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಲಿ ಎಂದು ಬಿಜೆಪಿ ನಾಯಕ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ ಕಾರಿದರು.
ಯಾವುದೇ ಸಂಶಯ ಬೇಡವೇ ಬೇಡ, ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರೆಯಲಿದ್ದಾರೆ. ನ್ಯಾಯಾಂಗದ ಮೇಲೆ ಗೌರವವಿದೆ. ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ. ಪ್ರಜಾಪ್ರಭುತ್ವದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವ ಅವಕಾಶವಿದೆ ನೋಡೋಣ ನ್ಯಾಯದ ಹಾದಿಯಲ್ಲಿ ಸಾಗಬೇಕಿದೆ ಎಂದರು.
ಬಿಜೆಪಿ ಅವರು ಎಷ್ಟೇ ರಾಜಕೀಯ ಮಾಡಿದರೂ ಗ್ಯಾರೆಂಟಿ ಫಲಾನುಭವಿಗಳು ಸಿದ್ದರಾಮಯ್ಯನವರ ಜೊತೆ ಗ್ಯಾರೆಂಟಿ ಆಗಿ ಇದ್ದಾರೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಆರೋಪಿ ಸ್ಥಾನದಲ್ಲಿರುವ ವಿಜಯೇಂದ್ರ ಅವರು ಮತ ಕೇಳಲಿಲ್ವಾ, ವಿಜಯೇಂದ್ರ ಅವರು ಅವರ ಅಪ್ಪನನ್ನು ಜೈಲಿಗೆ ಹಾಕಿದ್ದು ಮರೆತು ಬಿಟ್ಟರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಸಚಿವ ಮಧು ಬಂಗಾರಪ್ಪ ಆಕ್ರೋಶದ ಮಾತುಗಳಾಡಿದರು.
ಇನ್ನೂ ಈ ಕುಮಾರಸ್ವಾಮಿ ಅವರು ಬೇಲ್ ಮೇಲೆ ಓಡಾಡುತ್ತಿದ್ದಾರೆ ಯಾಕೆ ಬೇಕು ಇದೆಲ್ಲಾ ಅವರಿಗೆ ಎಂದರು.
ರಾಜಕೀಯ ಲಾಭಕ್ಕಾಗಿ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಹೊರಟ್ಟಿದ್ದಾರೆ. ಬಿಜೆಪಿಯವರು ಸರಕಾರ ಬಿಳಿಸುವ ಕೆಲಸ ಮಾಡುತ್ತಿದ್ದಾರೆ ಆದರೆ ಅವರ ಪ್ರಯತ್ನ ಯಶಸ್ಸು ಆಗಲ್ಲ, ಅವರ ಪ್ರಯತ್ನ ಸಫಲವಾಗುವುದಿಲ್ಲ ಎಂದರು.