Advertisement

ಕಿಮ್ಮನೆ ನಮ್ಮ ಜೊತೆಯಲ್ಲಿ ಕೂರಬೇಕಾಗಿತ್ತು… ಈಗ ಆ ಸ್ಥಾನ ನಾನು ತುಂಬಿ ಕೊಡುತ್ತೇನೆ

08:23 PM Jun 27, 2023 | Team Udayavani |

ತೀರ್ಥಹಳ್ಳಿ : ಇಂದು ಸೊರಬ, ಆನವಟ್ಟಿ ಹಾಗೂ ತಾಳಗುಪ್ಪದಲ್ಲಿ ಸಚಿವರ ಸ್ಥಳೀಯ ಕಚೇರಿ ಓಪನ್ ಮಾಡಿದ್ದೆನೆ. ಇದರಿಂದ ಜನರ ಅಹವಾಲು ಸ್ವೀಕರಿಸಲು ಅನುಕೂಲ ಆಗುತ್ತೇ. ಈಗ ಎಲ್ಲಾ ತಾಲೂಕಿನ ಅಧಿಕಾರಿಗಳ ಜೊತೆ ಒಂದು ಹಂತದ ಸಭೆ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆ ಗಳಿವೆ.ಕುಡಿಯುವ ನೀರು ಪೂರೈಕೆ ಆಗಬೇಕು. ಮಳೆಯ ಕೊರತೆಯಿಂದ ಡ್ಯಾಂ ನಲ್ಲಿ ನೀರಿಲ್ಲ.

Advertisement

ನನ್ನ ಕ್ಷೇತ್ರದಲ್ಲಿ ಟ್ಯಾಂಕರ್ ಮೂಲಕ ನೀರು ಕೊಡ್ತಾ ಇದ್ದೇವೆ. ಈ ಸಮಸ್ಯೆಯ ಜೊತೆಗೆ ಶಾಶ್ವತ ಪರಿಹಾರಕ್ಕೂ ಯೋಚನೆ ಮಾಡ್ತಾ ಇದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ತೀರ್ಥಹಳ್ಳಿಗೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿ ನನಗೆ ಸಿಕ್ಕಿರುವ ಶಿಕ್ಷಣ ಇಲಾಖೆ ದೊಡ್ಡದು, ಸಾಕಷ್ಟು ಸಮಸ್ಯೆಗಳು ಕೂಡ ಇವೆ. ರಾಜ್ಯದಲ್ಲಿ ಸುಮಾರು 45 ಸಾವಿರಕ್ಕೂ ಅಧಿಕ ಶಾಲೆಗಳಿವೆ. ಮೂಲಭೂತ ಸೌಕರ್ಯಗಳ ಕೊರತೆಯಿದೆ. ಎಲ್ಲವನ್ನು ಬಗೆಹರಿಸುತ್ತವೆ. ಇಲಾಖೆಗೆ ಸಂಬಂಧಿಸಿದ ಅನುದಾನಕ್ಕೆ ಬಜೆಟ್ ಅಲ್ಲಿ ಸೇರಿಸಲು ಪ್ರಯತ್ನ ಮಾಡುತ್ತಿದ್ದೇನೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೂಡ ನಡೆಯುತ್ತಿದ್ದು, ಪ್ರಕರಣ ಕೋರ್ಟ್ ನಲ್ಲಿದೆ. ಎಲ್ಲಾ ಸಮಸ್ಯೆಗಳ ಇತ್ಯರ್ಥಕ್ಕೆ ಒಂದು ಕಮಿಟಿ ಮಾಡಿ, ಕ್ರಮ ಕೈಗೊಳ್ಳುತ್ತೇವೆ ಎಂದರು.

ಲೋಕಸಭಾ ಚುನಾವಣೆ ವಿಷಯದ ಬಗ್ಗೆ ಮಾತನಾಡಿ ಗೀತಾ ಶಿವರಾಜ್ ಕುಮಾರ್ ಪಕ್ಷಕ್ಕೆ ಸೇರಿದ್ದಾರೆ. ಚುನಾವಣೆ ಸ್ಫರ್ಧೆ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಮಾಡ್ತಾರೆ. ಅದನ್ನೆಲ್ಲಾ ನಾನು ಮಾತಾಡಲ್ಲ. ತಪ್ಪಾಗುತ್ತೇ ಎಂದರು.

ಅದಕ್ಕೂ ಮೊದಲು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸನ್ಮಾನ ಸ್ವೀಕರಿಸಿ ಚುನಾವಣೆ ಸಂದರ್ಭದಲ್ಲಿ ನೀವು ತುಂಬಾ ಸಹಕಾರ ನೀಡಿದ್ದೀರಿ. ನಾನು ಕಿಮ್ಮನೆ ರತ್ನಾಕರ್ ಅವರು ನಮ್ಮ ಜೊತೆಯಲ್ಲಿ ಕೂರಬೇಕಾಗಿತ್ತು. ನಿಮ್ಮೆಲ್ಲರ ಶ್ರಮದ ಹೊರತಾಗಿಯೂ ನಾವು ಇಲ್ಲಿ ಕಳೆದುಕೊಂಡೆವು. ನೀವು ಇಲ್ಲಿ ಕಳೆದುಕೊಂಡರೂ ಮಧು ಬಂಗಾರಪ್ಪ ಆ ಸ್ಥಾನ ತುಂಬಿ ಕೊಡ್ತಾನೆ. ಇಲ್ಲಿ ನಾವೇನು ಕಳೆದುಕೊಂಡಿಲ್ಲ. ಪಕ್ಷಕ್ಕೆ ಅಧಿಕಾರ ಬಂದಿದೆ. ಅದನ್ನು ನಿಮ್ಮ ಮಡಿಲಿಗೆ ಹಾಕೋದು ನಮ್ಮ ಜವಾಬ್ದಾರಿ ಎಂದರು.

Advertisement

ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷದ ಕಛೇರಿಗೆ ಎಲ್ಲರೂ ಭೇಟಿ ನೀಡಲು ಸೂಚಿಸಿದ್ದಾರೆ. ನನ್ನ ಇಲಾಖೆಯ ಜವಾಬ್ದಾರಿ ಕೂಡ ನನ್ನ ಮೇಲಿದೆ.

ಆದರೂ, ಪಕ್ಷದ ಮುಖಂಡರು, ಕಾರ್ಯಕರ್ತರು ಕರೆದಾಗ ಖಂಡಿತಾ ಬರುತ್ತೇನೆ. ಜನರು ವಿಶ್ವಾಸದಿಂದ ಮತ ನೀಡಿ ಅಧಿಕಾರ ನೀಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಕಾಂಗ್ರೆಸ್ ಪಕ್ಷ ಬಡವರ ಕೆಲಸ ಮಾಡುತ್ತಲೇ ಇದೆ. ಮುಂಬರುವ ತಾ.ಪಂ. ಜಿ.ಪಂ. ಲೋಕಸಭೆ ಚುನಾವಣೆಯಲ್ಲೂ ನಿಮ್ಮ ಜೊತೆ ಇರ್ತೇವೆ. ಈಗಾಗಲೇ ಸರ್ಕಾರದ ಗ್ಯಾರಂಟಿ ಗಳನ್ನು ಹಂತ ಹಂತವಾಗಿ ಕೋಡ್ತಾ ಇದ್ದೇವೆ. ಬಿಜೆಪಿಯವರು ಅದನ್ನು ಹೇಗೆ ವಿಶ್ಲೇಷಣೆ ಮಾಡ್ತಾರೋ ಅದನ್ನ ಅವರಿಗೆ ಬಿಡೋಣ. ಇನ್ನೂ ಐದು ವರ್ಷ ಎಲ್ಲರ ಹೊಟ್ಟೆ ತುಂಬಿಸಿದ್ರು. ಬಿಜೆಪಿಯವರ ಹೊಟ್ಟೆ ತುಂಬೋದೆ ಇಲ್ಲ.

ಅವರು ಉದ್ಧಾರ ಆಗಲ್ಲ. ಅದರ ಬಗ್ಗೆ ನಾವು ಚರ್ಚೆ ಮಾಡೋದು ಬೇಡ. ಈ ಭಾಗದಲ್ಲಿ ನಾವು ಸೋತಿರಬಹುದು. ಆದರೆ, ಜನರ ಸೇವೆ ಮಾಡೋ ಅವಕಾಶ ಇದೆ. ಅಧಿಕಾರ ಇದೆ. ಗ್ಯಾರಂಟಿ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ತಹಶೀಲ್ದಾರ್ ಅಮೃತ್ ಅತ್ರೇಶ್ ಡಿವೈಎಸ್ಪಿ ಶಾಂತವೀರ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಜ್ಯ ಸರ್ಕಾರ ಬಿಟ್ ಕಾಯಿನ್ ಹಗರಣವನ್ನು ಮರು ತನಿಖೆ ನಡೆಸಲಿ: ಆರಗ ಜ್ಞಾನೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next