Advertisement

ಮಾಜಿ ಇಸ್ರೋ ಅಧ್ಯಕ್ಷ ಮಾಧವನ್‌ ನಾಯರ್‌ ಬಿಜೆಪಿ ಸೇರ್ಪಡೆ ; ಶಾ ಸ್ವಾಗತ

05:37 PM Oct 28, 2018 | Team Udayavani |

ತಿರುವನಂತಪುರಂ: ಮಾಜಿ ಇಸ್ರೋ ಅಧ್ಯಕ್ಷ ಮಾಧವನ್‌ ನಾಯರ್‌ ಅವರು ಶನಿವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ನಾಯರ್‌ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ.

Advertisement

74 ರ ಹರೆಯದ ಮಾಧವನ್‌ ನಾಯರ್‌ ಅವರು 2003 ರಿಂದ 2009 ರ ವರಗೆ ಇಸ್ರೋ ಅಧ್ಯಕ್ಷರಾಗಿ ಗಣನೀಯ ಸಾಧನೆ ಸಲ್ಲಿಸಿದ್ದರು. ಚಂದ್ರಯಾನ 1, ಇನ್ಸಾಟ್‌, ಪಿಎಸ್‌ಎಲ್‌ವಿ,ಜಿಎಸ್‌ಎಲ್‌ವಿ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 

ಆಂಟ್ರಿಕ್ಸ್‌ ದೆವಾಸ್‌ ಡೀಲ್‌ನಲ್ಲಿ 578 ಕೋಟಿ ರೂಪಾಯಿ ಹಗರಣ  ಆರೋಪ ನಾಯರ್‌ ವಿರುದ್ಧ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಫೆಬ್ರವರಿಯಲ್ಲಿ ದೆಹಲಿ ಕೋರ್ಟ್‌ ಜಾಮೀನು ನೀಡಿತ್ತು. 

ಪ್ರಮುಖರು ಪಕ್ಷಕ್ಕೆ 

ಕೇರಳದಲ್ಲಿ ಲೋಕಸಭಾ ಚುನಾವಣೆಯಲ್ಲಿ  ಖಾತೆ ತೆರೆಯಲು ಪಣ ತೊಟ್ಟಿರುವ ಶಾ ತಿರುವಾಂಕೂರ್‌ ದೇವಸ್ವಂ ಬೋರ್ಡ್‌ ಅಧ್ಯಕ್ಷ ,ಮಾಜಿ ಕಾಂಗ್ರೆಸ್‌ ನಾಯಕ ಜಿ ರಮಣ್‌ ನಾಯರ್‌ , ಮಾಜಿ ಮಹಿಳಾ ಆಯೋಗದ ಸದಸ್ಯೆ  ಡಾ.ಪ್ರಮೀಳಾ ದೇವಿ .ಜೆಡಿಎಸ್‌ ನಾಯಕ ಕರ್ನಾಕುಲಂ ,ಮಾಲಾಂಕಾರಾ ಚರ್ಚ್‌ನ ಥಾಮಸ್‌ ಜಾನ್‌ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next