Advertisement
ಭಾರತೀಯ ತರಕಾರಿ ಸಂಶೋಧನಾ ಕೇಂದ್ರ 23 ವರ್ಷಗಳ ಕಠಿಣ ಪರಿಶ್ರಮದ ಅನಂತರ ಅಂತಿಮವಾಗಿ ಹೊಸ ಜಾತಿಯ ಬೆಂಡೆಕಾಯಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಇಷ್ಟು ದಿನ ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತಿದ್ದ ಈ ಕೆಂಪು ಬೆಂಡೆಕಾಯಿಯನ್ನು, ಇನ್ನು ಮುಂದೆ ನಮ್ಮ ದೇಶದಲ್ಲೂ ಬೆಳೆಯಬಹುದು. ಹಾಗೆಯೇ ನಮ್ಮ ರೈತರು ಬೆಳೆಯತೊಡಗಿದರೆಂದರೆ ಈಗ ವಿದೇಶದಿಂದ ಮಾಡಿಕೊಳ್ಳುತ್ತಿರುವ ಆಮದನ್ನು ನಿಲ್ಲಿಸಬಹುದು.
ವಿಜ್ಞಾನಿಗಳ ಪ್ರಕಾರ, ಈ ಬೆಂಡೆಕಾಯಿಯಲ್ಲಿ ಅಪಾರ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್ (ಕೋಶಗಳ ಪುನರುತ್ಪಾದನ ಶಕ್ತಿ), ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಎಲ್ಲ ಪೋಷಕಾಂಶಗಳು ದೊರಕುತ್ತವೆಯಂತೆ. ಸಾಮಾನ್ಯವಾಗಿ ನಮ್ಮ ಮಾರುಕಟ್ಟೆಯಲ್ಲಿ ಸಿಗುವ ಬೆಂಡೆಕಾಯಿಗಿಂತಲೂ ಹೆಚ್ಚಿನ ಬೆಲೆ ಈ ಕೆಂಪು ಬೆಂಡೆಗೆ ಸಿಗುತ್ತದೆ. ಒಂದು ಕೆ.ಜಿ. ಕಾಶಿ ಲಲಿಮಾ ಬೆಂಡೆಕಾಯಿಗೆ 500 ರೂಪಾಯಿಗಳವರೆಗೆ ಬೆಲೆ ಇದೆ. ಇಷ್ಟು ದಿನ ಈ ಕೆಂಪು ಬೆಂಡೆಕಾಯಿಯನ್ನು ಪಾಶ್ಚಿಮಾತ್ಯ ದೇಶಗಳಿಂದ ಆಮದು ಮಾಡಿಕೊಂಡಾಗ ಗ್ರಾಹಕರು ಇಷ್ಟೊಂದು ಹೆಚ್ಚಿನ ಬೆಲೆ ಕೊಟ್ಟು ಖರೀದಿಸುತ್ತಿದ್ದರು. ಈ ತಳಿಯನ್ನು ಅಭಿವೃದ್ಧಿಪಡಿಸಿದ ಅನಂತರ ಅದನ್ನು ಆಮದು ಮಾಡುವ ಅಗತ್ಯ ಬರುವುದಿಲ್ಲ. ಆಗ ಅದರ ಬೆಲೆಯೂ ತಗ್ಗಲಿದೆ.
Related Articles
ಕೆಂಪು ಬೆಂಡೆಕಾಯಿಯನ್ನು ಈವರೆಗೂ ವಿದೇಶದಲ್ಲಿ ಹಾಗೂ ನಮ್ಮ ದೇಶದ ಶ್ರೀಮಂತರ ಮನೆಗಳಲ್ಲಿ ಮಾತ್ರ ನೋಡಬಹುದಿತ್ತು. 1995-96ರಲ್ಲಿಯೇ ಈ ತರಕಾರಿ ತಳಿಯ ಅಭಿವೃದ್ಧಿಯ ಕೆಲಸ ಪ್ರಾರಂಭ ವಾಯಿತಾದರೂ ಈಗ ಯಶಸ್ಸು ಸಿಕ್ಕಿದೆ. ಭಾರತೀಯ ಕೃಷಿ ವಿಜ್ಞಾನಿಗಳು ಸುಮಾರು 23 ವರ್ಷಗಳ ಕಾಲ ಶ್ರಮಿಸಿ ಅಭಿವೃದ್ಧಿಪಡಿಸಿದ ಈ ಬೆಂಡೆಕಾಯಿ ತಳಿಗೆ “ಕಾಶಿ ಲಲಿಮಾ’ ಎಂದು ಹೆಸರಿಡಲಾಗಿದೆ. ಇವು ಡಿಸೆಂಬರ್‌ನಿಂದ ನಮ್ಮ ತರಕಾರಿ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿವೆ.
Advertisement
1995-96ರಲ್ಲಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ| ಬಿಜೇಂದ್ರ ಅವರ ನೇತೃತ್ವದಲ್ಲಿ ಸಂಶೋಧನೆ ಪ್ರಾರಂಭಿಸಲಾಯಿತು. ಅವರ ಜತೆಗೆ ಡಾ| ಎಸ್.ಕೆ. ಸನ್ವಾಲ, ಡಾ| ಜಿ.ಪಿ. ಮಿಶ್ರಾ ಮತ್ತು ತಾಂತ್ರಿಕ ಸಹಾಯಕ ಸುಭಾಶ್ಚಂದ್ರ ಕೂಡ ಇದರಲ್ಲಿ ಗಮನಾರ್ಹ ಕೊಡುಗೆ ನೀಡಿ¨ªಾರೆ. ನೇರಳೆ-ಕೆಂಪು ಬಣ್ಣದಲ್ಲಿರುವ ಈ ಬೆಂಡೆ, 11-14 ಸೆಂ.ಮೀ. ಉದ್ದ ಮತ್ತು 1.5-1.6 ಸೆಂ.ಮೀ. ವ್ಯಾಸವನ್ನು ಹೊಂದಿರುತ್ತದೆ.
ಎಸ್.ಕೆ. ಪಾಟೀಲ್