Advertisement

ಮೇಡ್‌ ಇನ್‌ ಇಂಡಿಯಾ ಕೂ

04:55 PM Jul 13, 2020 | Suhan S |

ಮೈಕ್ರೊ ಬ್ಲಾಗಿಂಗ್‌ ಸೈಟ್‌ ಆಗಿರುವ ಟ್ವಿಟ್ಟರ್‌ ಜಗತ್ತಿನಾದ್ಯಂತ ಜನಪ್ರಿಯವಾದ ಸಾಮಾಜಿಕ ಜಾಲತಾಣ. ಚುಟುಕಾಗಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ, ಮಾಹಿತಿ ಹಂಚಿಕೊಳ್ಳಲು ಇರುವ ಆನ್‌ಲೈನ್‌ ವೇದಿಕೆಗಳಲ್ಲೇ ಇದು ಮುಂಚೂಣಿಯಲ್ಲಿದೆ. ಕನ್ನಡಿಗರಿಂದ, ಕನ್ನಡಿಗರಿಗಾಗಿ ಶುರುವಾದ “ಕೂ’ ಎನ್ನುವ ಮೈಕ್ರೊ ಬ್ಲಾಗಿಂಗ್‌ ಆ್ಯಪ್‌ ಕುರಿತು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದರ ವೈಶಿಷ್ಟ್ಯವೆಂದರೆ, ಬಳಕೆದಾರರು ಕನ್ನಡದಲ್ಲಿಯೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳ ಬಹುದು. “ಕೂ’ ಆ್ಯಪ್‌ನಲ್ಲಿ ವಿಡಿಯೊ ಮೂಲಕ ಅಭಿಪ್ರಾಯಗಳನ್ನು ಶೇರ್‌ ಮಾಡುವ ಸವಲತ್ತನ್ನು ಒದಗಿಸಲಾಗಿದೆ. ಒಮ್ಮೆಗೆ 10 ನಿಮಿಷದ ವಿಡಿಯೊ ಅಪ್‌ಲೋಡ್‌ ಮಾಡಬಹುದಾಗಿದೆ.

Advertisement

ಅಂತರ್ಜಾಲದಲ್ಲಿ ಕನ್ನಡದಲ್ಲಿ ಟೈಪ್‌ ಮಾಡುವುದು ಕಷ್ಟ ಸಾಧ್ಯ. ಆದರೆ ಕೂ ಆ್ಯಪ್‌ನಲ್ಲಿ ಯಾವುದೇ ಹೆಚ್ಚುವರಿ ಸಾಫ್ಟ್ ವೇರ್‌ ನೆರವಿಲ್ಲದೆ ಸುಲಭವಾಗಿ ಕನ್ನಡದಲ್ಲಿ ಪೋಸ್ಟ್ ಟೈಪ್‌ ಮಾಡಿ, ಶೇರ್‌ ಮಾಡಬಹುದಾಗಿದೆ. ಪ್ರತಿ ಪೋಸ್ಟ್ ಗೆ ವಿಧಿಸಲಾಗಿರುವ ಗರಿಷ್ಠ ಪದಮಿತಿ 350 ಪದಗಳು. ಕೂ ಆ್ಯಪ್‌ ಅನ್ನು ಇದುವರೆಗೂ ಸುಮಾರು 3 ಲಕ್ಷ ಮಂದಿ ಇನ್‌ಸ್ಟಾಲ್‌ ಮಾಡಿಕೊಂಡು ಬಳಸುತ್ತಿದ್ದು, ಅವರಲ್ಲಿ ಖ್ಯಾತನಾಮ ಕನ್ನಡಿಗರೂ ಸೇರಿದ್ದಾರೆ. ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌, ಅನಿಲ್‌ ಕುಂಬ್ಳೆ ಮತ್ತು ರಾಜಕೀಯ, ಚಿತ್ರರಂಗದ ಹಲವು ಗಣ್ಯರೂ ಕೂ ಅನ್ನು ಬಳಸುತ್ತಿದ್ದಾರೆ. ಕೂ ಆಂಡ್ರಾಯ್ಡ್ ಆ್ಯಪ್‌ ಅನ್ನು ಪ್ಲೇ ಸ್ಟೋರಿನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ­

Advertisement

Udayavani is now on Telegram. Click here to join our channel and stay updated with the latest news.

Next