ನಾಗಭೂಷಣ್, ಪ್ರಿಯಾಂಕಾ ತಿಮ್ಮೇಶ್, ಗೌರವ್ ಶೆಟ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಅರುಣಾ ಬಾಲರಾಜ್, ರವಿ ಭಟ್ ಮೊದಲಾದವರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿರುವ ಕಾಮಿಡಿ ಕಥಾಹಂದರದ “ಮೇಡ್ ಇನ್ ಚೈನಾ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಇದೇ ಮಾರ್ಚ್ 11ಕ್ಕೆ “ಮೇಡ್ ಇನ್ ಚೈನಾ’ ಚಿತ್ರ ಥಿಯೇಟರ್‌ಗೆ ಬರಲಿದೆ.
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಸಿನಿಮಾಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿದ ಅನುಭವವಿರುವ ಪ್ರೀತಂ ತೆಗ್ಗಿನಮನೆ “ಮೇಡ್ ಇನ್ ಚೈನಾ’ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಛಾಯಾಗ್ರಹಣದಿಂದ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಜೊತೆಗೆ “ಮೇಡ್ ಇನ್ ಚೈನಾ’ ಚಿತ್ರಕ್ಕೆ ಪ್ರೀತಂ ತೆಗ್ಗಿನಮನೆ ಅವರೇ ಛಾಯಾಗ್ರಹಣ, ವಿಎಫ್ಎಕ್ಸ್ ಮತ್ತು ಸಂಕಲನ ಕೆಲಸವನ್ನೂ ನಿರ್ವಹಿಸಿದ್ದಾರೆ.
ಇದನ್ನೂ ಓದಿ:ಕೆಜಿಎಫ್-2 ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಅಧಿಕೃತ ಘೋಷಣೆ ಮಾಡಿದ ಹೊಂಬಾಳೆ ಫಿಲಂಸ್
ಇನ್ನು “ಮೇಡ್ ಇನ್ ಚೈನಾ’ ಚಿತ್ರದ ಕಥಾಹಂದರದ ಬಗ್ಗೆ ಹೇಳುವುದಾದರೆ, ಲಾಕ್‌ಡೌನ್ ಸಂದರ್ಭದಲ್ಲಿ ಪತಿಯು ವಿದೇಶದಲ್ಲಿ ಲಾಕ್ ಆಗುತ್ತಾನೆ. ಹೆಂಡತಿ ಭಾರತದಲ್ಲಿರುತ್ತಾಳೆ. ಇವರ ನಡುವೆ ನಡೆಯುವ ಕಥೆಯೇ “ಮೇಡ್ ಇನ್ ಚೈನಾ’ ಕಥಾವಸ್ತು. ಅಂದಹಾಗೆ, ಕೋವಿಡ್ ಲಾಕ್‌ಡೌನ್ ಸನ್ನಿವೇಶಗಳನ್ನು ಎಳೆಯಾಗಿಟ್ಟುಕೊಟ್ಟು ಈ ಸಿನಿಮಾ ಮಾಡಲಾಗಿದ್ದು, “ಮೇಡ್ ಇನ್ ಚೈನಾ’ ಕನ್ನಡದ ಮೊದಲ ವರ್ಚುವಲ್ ಸಿನಿಮಾ ಆಗಿದೆ ಎನ್ನುವುದು ಚಿತ್ರತಂಡದ ಮಾತು.
“ಮೇಡ್ ಇನ್ ಚೈನಾ’ ಚಿತ್ರಕ್ಕೆ ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಚಿತ್ರಕಥೆ, ವಿವಾನ್ ರಾಧಾಕೃಷ್ಣ ಚಿತ್ರದ ಸಂಗೀತವಿದೆ. “ಎನ್. ಕೆ. ಸ್ಟುಡಿಯೋಸ್’ ಬ್ಯಾನರ್‌ನಡಿ ನಂದಕಿಶೋರ್ ನಿರ್ಮಿಸಿದ್ದಾರೆ