Advertisement
ದೀಪಕ್ ಅಂತ್ಯಕ್ರಿಯೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮಲತಾ ‘ನನ್ನ ಮಗ ತುಂಬಾ ಪಾಪದವ, ಪ್ರತೀ ದಿನ ಕೆಲಸ ಮುಗಿಸಿ ಸಂಜೆ 7 ಗಂಟೆಯ ಒಳಗೆ ಮನೆಗೆ ಬರುತ್ತಿದ್ದ. ಮನೆಗೆ ಆಧಾರವಾಗಿದ್ದ. ಅವನೇ ಸಾಲ ಮಾಡಿ ಮನೆ ಕಟ್ಟಿದ್ದ. ಇನ್ನು 2 ಲಕ್ಷ ಸಾಲ ಬಾಕಿ ಉಳಿದಿದೆ. ಅದನ್ನು ತೀರಿಸುತ್ತೇನೆ. ನಿಮ್ಮ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬರುತ್ತೇನೆ ಎಂದಿದ್ದ. ನಾನು ನೀನೆ ನನಗೆ ಚಿನ್ನ ಎಂದಿದ್ದೆ’ ಎಂದು ಕಣ್ಣೀರಿಟ್ಟರು.
Related Articles
Advertisement
ಮುಸ್ಲಿಂ ಮಾಲೀಕನ ಅಂಗಡಿಯಲ್ಲಿ ಕೆಲಸ!ಮಜೀದ್ ಎನ್ನುವವರ ಮೊಬೈಲ್ ಅಂಗಡಿಯಲ್ಲಿ ಸಿಮ್ ಕಾರ್ಡ್ ಮಾರುವ ಕೆಲಸ ಮಾಡಿಕೊಂಡಿದ್ದ ದೀಪಕ್ ಗೆ ತಿಂಗಳಿಗೆ 11 ಸಾವಿರ ಸಂಬಳ ಪಡೆಯುತ್ತಿದ್ದ. ಸಂಬಳದಲ್ಲಿ 6 ಸಾವಿರವನ್ನು ಮನೆಯ ಸಾಲದ ಕಂತಿಗೆ ಕಟ್ಟುತ್ತಿದ್ದರೆ, 1,500 ರೂಪಾಯಿ ಬೈಕ್ ಸಾಲದ ಕಂತಿಕೆ ಕಟ್ಟುತ್ತಿದ್ದ, ಮನೆಗೆ 2,500 ರೂಪಾಯಿ ಖರ್ಚಿಗೆ ತಾಯಿಗೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಮಜೀದ್ ತೀವ್ರ ದುಃಖ
ದೀಪಕ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಮೊಬೈಲ್ ಅಂಗಡಿ ಮಾಲಕ ಮಜೀದ್ ‘ದೀಪಕ್ ಒಳ್ಳೆಯ ಹುಡುಗ. ಕಳೆದ 7 ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿಕೊಂಡಿದ್ದ. ಯಾರ ಬಳಿಯೂ ಜಗಳವಾಡುತ್ತಿರಲಿಲ್ಲ, ಸ್ನೇಹಮಯಿಯಾದ ಅವನ ಹತ್ಯೆ ನನಗೆ ನಂಬಲಾಗುತ್ತಿಲ್ಲ’ ಎಂದು ಸಖೇದಾಶ್ಚರ್ಯ ವ್ಯಕ್ತಪಡಿಸಿದ್ದಾರೆ.