Advertisement

ಮಧೂರು : ಮದರು ಮಹಾಮಾತೆಗೆ ಸೂಕ್ತ ಸ್ಥಾನಮಾನ ; ಆಗ್ರಹ

02:36 PM Mar 16, 2017 | Harsha Rao |

ಮಧೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಸ್ಥಳವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮದರು ಮಹಾಮಾತೆಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂದು ಶ್ರೀ ಮದರು ಮಹಾಮಾತೆ ಮೊಗೇರ ಸಮಿತಿ ಸಭೆಯಲ್ಲಿ ಮೊಗೇರ ಸಮಾಜ ಬಾಂಧವರು ಸಂಬಂಧಪಟ್ಟವರನ್ನು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

Advertisement

ಕೊಲ್ಯ ಸಮುದಾಯ ಭವನ ಪರಿಸರದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಆನಂದ ಕೆ.ಮವ್ವಾರು ವಹಿಸಿದ್ದರು. 25 ಕೋಟಿ ರೂ. ವೆಚ್ಚದಲ್ಲಿ ಮಧೂರು ದೇವಸ್ಥಾನ ನವೀಕರಣ ನಡೆಯುತ್ತಿದ್ದು, ಅಲ್ಲಿ ಪೂಜಿಸಲ್ಪಡುವ ಶ್ರೀ ಮದನಂತೇಶ್ವರನೊಲಿದ ಮೊಗೇರ ಸಮುದಾಯದ ಮದರು ಮಹಾಮಾತೆ ಯನ್ನು ಸ್ಮರಿಸಲು ಅಥವಾ ಆರಾಧಿಸಲು ಯಾವುದೇ ಯೋಜನೆಗಳನ್ನು ನವೀಕರಣ ಸಮಿತಿ ಕೈಗೊಂಡಿಲ್ಲ. ಈ ಪ್ರಮಾದವನ್ನು ಸರಿಪಡಿಸಿ ಮದರುವಿನ ಆರಾಧನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮದರುವಿಗೆ ಗುಡಿ ಕಟ್ಟಿ ಪ್ರತಿಮೆ ಸ್ಥಾಪಿಸಬೇಕೆಂದು ಆನಂದ ಕೆ. ಮವ್ವಾರು ಹೇಳಿದರು.

ಈ ಕುರಿತು ಕೇರಳ ಧಾರ್ಮಿಕ ದತ್ತಿ ಖಾತೆಯ ಸಚಿವರಿಗೆ, ಮಲಬಾರ್‌ ದೇವಸ್ವಂ ಮಂಡಳಿ ಅಧ್ಯಕ್ಷರಿಗೆ ಮತ್ತು ಸಂಬಂಧಪಟ್ಟ ಸರ್ವರಿಗೂ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮೊಗೇರ ಸಮುದಾಯದ ಹಿರಿಯ ವ್ಯಕ್ತಿ, ನಿವೃತ್ತ ತಹಶೀಲ್ದಾರ್‌ ಸಿ.ಎಚ್‌.ಶ್ಯಾಮ್‌ ಚೇನೆಕ್ಕೋಡು ಸಭೆಯನ್ನು ಉದ್ಘಾಟಿಸಿದರು. ಮೂರು ದಶಕಗಳ ಹಿಂದೆ ಮದರು ಆರಾಧನಾ ಸಮಿತಿಯ ನೇತೃತ್ವದಲ್ಲಿ ಮೊಗೇರ ಬಾಂಧವರು ಆಳೆತ್ತರದ ಎರಡು ನಂದಾದೀಪಗಳನ್ನು ಶ್ರೀ ಮದನಂತೇಶ್ವರನ ಮೂಲಸ್ಥಾನ ಉಳಿಯತ್ತಡ್ಕದಿಂದ ಮೆರವಣಿಗೆಯ ಮೂಲಕ ತಂದು ಮಧೂರು ದೇವಸ್ಥಾನ ದಲ್ಲಿ ಪ್ರತಿಷ್ಠಾಪಿಸಿದ ಸ್ಮರಣೀಯ ಘಟನೆಯನ್ನು ಅವರು ಪ್ರಸ್ತಾಪಿಸಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಾಸ್ತಾವಿಕ ಮಾತು ಗಳನ್ನಾಡಿ ಮಧೂರು ದೇಗುಲ ನಿರ್ಮಾಣಕ್ಕೆ ಕಾರಣೀಭೂತಳಾದ ಮದರುವಿನ ಕುರಿತಾದ ದಾಖಲೆಗಳನ್ನು ಸಭೆಯ ಮುಂದಿರಿಸಿದರು.

ಸಾಮಾಜಿಕ, ಧಾರ್ಮಿಕ ಮುಖಂಡ ರಾಮಪ್ಪ ಮಂಜೇಶ್ವರ, ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್‌, ವಿವಿಧ ಕ್ಷೇತ್ರಗಳ ಗಣ್ಯರಾದ ಗಣೇಶ್‌ ಮಜಕ್ಕಾರ್‌, ಕೃಷ್ಣದಾಸ್‌ ದರ್ಬೆತ್ತಡ್ಕ, ಲಕ್ಷ್ಮಣ ಪೆರಿಯಡ್ಕ, ನಿಟ್ಟೋಣಿ ಬಂದ್ಯೋಡು, ಅಂಗಾರ ಅಜಕ್ಕೋಡು, ರವಿಕಾಂತ ಕೇಸರಿ ಕಡಾರು, ಸುರೇಶ್‌ ಕಾಳ್ಯಂಗಾಡು, ಶಂಕರ ಕೊಲ್ಯ, ಚಂದ್ರಶೇಖರ ಕುಂಬಳೆ, ವಸಂತ ಅಜಕ್ಕೋಡು, ಗಂಗಾಧರ ಗೋಳಿಯಡ್ಕ, ಕೃಷ್ಣ ಧರ್ಮೆತ್ತಡ್ಕ, ತುಕ್ರ ಬಂದ್ಯೋಡು, ಸುಂದರ ಕೊಲ್ಯ, ಪದ್ಮನಾಭ ಸಿ.ಎಚ್‌, ಧರ್ಮಪಾಲ ಸಿ.ಎಚ್‌., ಐತ್ತಪ್ಪ ಚೆನ್ನೆಗುಳಿ, ಬಾಬು ಬಂದ್ಯೋಡು, ಶಂಕರ ಎಂ.ಎಸ್‌, ಸದಾನಂದ ಶೇಣಿ, ರಾಮ ಪಟ್ಟಾಜೆ, ಶಂಕರ ಸ್ವಾಮಿಕೃಪಾ, ಉದಯ ಸಾರಂಗ, ಹರಿರಾಮ ಕುಳೂರು, ಜೀವನ್‌ ಚೇನಕ್ಕೋಡು, ಗುರುಪ್ರಸಾದ್‌ ಸಿ.ಎಚ್‌., ಸುಧಾಕರ ಬೆಳ್ಳಿಗೆ ಸಹಿತ ಹಲವರು ಅಭಿಪ್ರಾಯ ಮಂಡಿಸಿದರು.
ಜಿಲ್ಲೆಯ ವಿವಿಧೆಡೆಗಳ ಮೊಗೇರ ಬಾಂಧವರು ಆಗಮಿಸಿ ಶ್ರೀ ಮದರು ಮಹಾಮಾತೆ ಮೊಗೇರ ಸಮಿತಿಯ ಸದುದ್ದೇಶಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸುಂದರಿ ಅವರು ಪ್ರಾರ್ಥನೆ ಹಾಡಿದರು. ಸುಜಿತ್‌ ಕೊಲ್ಯ ಸ್ವಾಗತಿಸಿದರು. ಸಮಿತಿ ಕೋಶಾಧಿಕಾರಿ ಗೋಪಾಲ ಡಿ. ದರ್ಬೆತ್ತಡ್ಕ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next