Advertisement
ಮಡಿಕೇರಿ ನಗರದಿಂದ 5 ಕಿ.ಮೀ. ದೂರದಲ್ಲಿರುವ ಕಾಫಿ ತೋಟಕ್ಕೆ ರವಿವಾರ ರಾತ್ರಿ ಲಗ್ಗೆ ಇಟ್ಟ ಕಾಡಾನೆಗಳು ಕಾಫಿ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಹಲಸಿನ ಹಣ್ಣು ಯಥೇತ್ಛವಾಗಿ ಇರುವ ಕಾರಣ ಆನೆಗಳು ಅಲ್ಲೇ ಬೀಡು ಬಿಟ್ಟಿವೆ. ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬಂದಿ ಮಾಡಿದ ಪ್ರಯತ್ನ ವಿಫಲವಾಗಿದೆ.
ಕುಶಾಲನಗರ ವಲಯ ಉಪ ಅರಣ್ಯಾಧಿಕಾರಿ ಕನ್ನಂಡ ರಂಜನ್ ನೇತೃತ್ವದಲ್ಲಿ ಮಡಿಕೇರಿ ಅರಣ್ಯ ಸಿಬಂದಿ, ರ್ಯಾಪಿಡ್ ರೆಸ್ಪಾನ್ಸ್ ತಂಡ ಕಾರ್ಯಾಚರಣೆ ನಡೆಸುತ್ತಿದೆ.